ಬೀಜಿಂಗ್: ಯುರೋಪ್ ಒಕ್ಕೂಟ (ಇಯು) ಪ್ರಮುಖ ರಾಜತಾಂತ್ರಿಕ ಅಧಿಕಾರಿ ಜೋಸೆಪ್ ಬೊರೆಲ್ ಅವರು ಮುಂದಿನವಾರ ಕೈಗೊಳ್ಳಬೇಕಿದ್ದ ಚೀನಾ ಭೇಟಿಯನ್ನು ಬೀಜಿಂಗ್ ರದ್ದುಪಡಿಸಿದೆ.
'ಮುಂದಿನವಾರ ನಿಗದಿಯಾಗಿದ್ದ ಭೇಟಿ ಸಾಧ್ಯವಾಗುತ್ತಿಲ್ಲ. ಪರ್ಯಾಯ ಮಾರ್ಗಗಳತ್ತ ಗಮನಹರಿಸಬೇಕಿದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ' ಎಂದು ಒಕ್ಕೂಟದ ವಕ್ತಾರ ನಬಿಲಾ ಮಸ್ರಾಲಿ ಮಂಗಳವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.