ವಾಷಿಂಗ್ಟನ್: ಲಾಸ್ ಏಂಜಲೀಸ್‌ನ ಮೇಯರ್ ಎರಿಕ್ ಗಾರ್ಸೆಟ್ಟ್ ಅವರನ್ನು ಭಾರತಕ್ಕೆ ದೇಶದ ರಾಯಭಾರಿಯನ್ನಾಗಿ ನೇಮಕ ಮಾಡುವ ಆದೇಶದ ದೃಢೀಕರಣವನ್ನು ರಿಪಬ್ಲಿಕನ್ ಸೆನೆಟರ್‌ನ ಉನ್ನತ ಅಧಿಕಾರಿಯೊಬ್ಬರು ತಡೆಹಿಡಿದಿದ್ದಾರೆ.
ಎರಿಕ್ ಅವರ ಮೇಲೆ ಲೈಂಗಿಕ ಆರೋಪಗಳಿಗೆ ಸಂಬಂಧಿಸಿ ತನಿಖೆ ಬಾಕಿ ಇರುವುದಾಗಿ ಮಾಧ್ಯಮವೊಂದು ಮಾಡಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಿಟಿ ಹಾಲ್ ಒಳಗೆ ಮತ್ತು ಸುತ್ತಮುತ್ತ ಮಹಿಳೆಯರು ಮತ್ತು ಪುರುಷರ ಜೊತೆ ದೀರ್ಘಕಾಲದ ರಾಜಕೀಯ ಸಲಹೆಗಾರ ಮತ್ತು ಸಿಟಿ ಹಾಲ್‌ನ ವಿಶ್ವಾಸಾರ್ಹ ಅಧಿಕಾರಿ ರಿಕ್ ಜಾಕೊಬ್ಸ್ ಅವರ ಅನುಚಿತ ವರ್ತನೆಯ ಬಗ್ಗೆ ಗಾರ್ಸೆಟ್ಟ್ ಅವರಿಗೆ ಯಾವ ಮಾಹಿತಿ ಇದೆ ಎಂಬುದರ ಬಗ್ಗೆ ಸೆನೆಟರ್ ಚುಕ್ ಗ್ರಾಸೆಲೀ ಅವರ ಕಚೇರಿ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಿಪಬ್ಲಿಕನ್ ಸೆನೆಟರ್‌ನ ಉನ್ನತ ಅಧಿಕಾರಿಗಳಲ್ಲಿ ಗ್ರಾಸೆಲೀ ಅವರೂ ಒಬ್ಬರಾಗಿದ್ದಾರೆ.
ಸೆನೆಟರ್ ಗ್ರಾಸೆಲೀ ಅವರು ನೇಮಕಾತಿ ದೃಢೀಕರಿಸಿದರೆ ಗ್ರಾಸೆಟ್ಟ್ ಅವರು ಸದ್ಯ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆನ್ನೆತ್ ಜಸ್ಟರ್ ಅವರ ಸ್ಥಾನ ವಹಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.