ADVERTISEMENT

ಶ್ರೀಲಂಕಾದಲ್ಲಿ ಹಿಂಸಾಚಾರ: ಉನ್ನತ ಪೊಲೀಸ್‌ ಅಧಿಕಾರಿ ಮೇಲೆ ದಾಳಿ

ಹಿರಿಯ ಉಪ ಪೊಲೀಸ್‌ ಮಹಾ ನಿರ್ದೇಶಕ ದೇಶಬಂದು ತೆನ್ನಕೋನ್ ಅವರ ವಿರುದ್ಧ ದಾಳಿ

ಏಜೆನ್ಸೀಸ್
Published 10 ಮೇ 2022, 13:30 IST
Last Updated 10 ಮೇ 2022, 13:30 IST
ಸಾಂದರ್ಭಿಕ ಚಿತ್ರ –ಎಎಫ್‌ಪಿ
ಸಾಂದರ್ಭಿಕ ಚಿತ್ರ –ಎಎಫ್‌ಪಿ   

ಕೊಲಂಬೊ: ಶ್ರೀಲಂಕಾದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ಮಾಡಿ, ಅವರ ವಾಹನಕ್ಕೆ ಬೆಂಕಿ ಇಟ್ಟಿರುವ ಘಟನೆಪ್ರಧಾನಿ ಅವರ ಅಧಿಕೃತ ನಿವಾಸದ ಸಮೀಪ ಮಂಗಳವಾರ ನಡೆದಿದೆ.

’ಕೊಲಂಬೊದಹಿರಿಯ ಉಪ ಪೊಲೀಸ್‌ ಮಹಾ ನಿರ್ದೇಶಕ ದೇಶಬಂದು ತೆನ್ನಕೋನ್ ಅವರ ವಿರುದ್ಧ ದಾಳಿ ನಡೆದಿದೆ. ಅಗತ್ಯ ತುರ್ತು ಚಿಕಿತ್ಸೆ ನೀಡಿ ಅವರನ್ನು ಮನೆಗೆ ವಾಪಸ್‌ ಕರೆತರಲಾಗಿದೆ. ದಾಳಿ ವೇಳೆ ದೇಶಬಂದು ಅವರು ಸಿವಿಲ್‌ ವಸ್ತ್ರದಲ್ಲಿದ್ದರು. ಅವರೊಂದಿಗೆ ಇಬ್ಬರು ಪೊಲೀಸ್‌ ಅಧಿಕಾರಿಗಳೂ ಇದ್ದರು‘ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಸರ್ಕಾರದ ಪರ ಇರುವ ಪ್ರತಿಭಟನಾಕಾರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಶ್ರೀಲಂಕಾದಲ್ಲಿ ದೇಶದ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಸರ್ಕಾರದ ಪರ ಇರುವ ಗುಂಪೊಂದು ದಾಳಿ ನಡೆಸಿತ್ತು. ಹೀಗಾಗಿ ಕರ್ಫ್ಯೂ ಜಾರಿ ಮಾಡಲಾಗಿತ್ತು. ದೇಶಬಂದು ಅವರು ರಾಜಧಾನಿಯಲ್ಲಿ ಭದ್ರತೆಯನ್ನು ನಿಯೋಜಿಸುವ ಹೊಣೆ ಹೊತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.