ವಾಷಿಂಗ್ಟನ್: ಅಮೆರಿಕದ ಭಯೋತ್ಪಾದನಾ ನಿಗ್ರಹದ ಉನ್ನತ ಅಧಿಕಾರಿ ತಿಮೋತಿ ಬೆಟ್ಸ್ ಅವರುಅಮೆರಿಕ–ಭಾರತದ ಭಯೋತ್ಪಾದನಾ ನಿಗ್ರಹದ ಜಂಟಿ ಕಾರ್ಯಾಚರಣೆಯ ವಾರ್ಷಿಕ ಸಭೆಗೆ ಹಾಜರಾಗಲು ಡಿಸೆಂಬರ್12ರಂದು ದೆಹಲಿಗೆ ಆಗಮಿಸಲಿದ್ದಾರೆ.
ಈ ಸಭೆಯಲ್ಲಿಪ್ರಾದೇಶಿಕ ಮತ್ತು ಜಾಗತಿಕ ಭಯೋತ್ಪಾದನಾ ಬೆದರಿಕೆ, ಜಾರಿಗೊಳಿಸಬೇಕಿರುವ ಕಾನೂನು, ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಭಯೋತ್ಪಾದನಾ ನಿಗ್ರಹದ ಕ್ರಮ ಹಾಗೂ ನ್ಯಾಯಾಂಗವನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಾಗುವುದು.
ಬೆಟ್ಸ್ ಅವರು ಮೊದಲು ಜಪಾನ್, ಫಿಲಿಪ್ಪೀನ್ಸ್‌ಗೆ ಭೇಟಿ ನೀಡಿ ನಂತರ ಭಾರತಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 8ಕ್ಕೆ ಆರಂಭವಾಗುವ ಇವರ ಪ್ರವಾಸ 14ರಂದು ಪೂರ್ಣಗೊಳ್ಳಲಿದೆ. ಭಾರತದಲ್ಲಿ ಡಿಸೆಂಬರ್ 12–13ರಂದು ಸಭೆ ನಡೆಯಲಿದೆ.
ಡಿ.8ರಂದು ಜಪಾನ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಜಪಾನ್‌ನ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆದಿದ್ದು, ಭಾರತ–ಪೆಸಿಫಿಕ್‌ನಲ್ಲಿನ ನಿರಂತರ ಭಯೋತ್ಪಾದನಾ ಬೆದರಿಕೆ ಸೇರಿದಂತೆ ಭಯೋತ್ಪಾದನಾ ಚಟುವಟಿಕೆಯ ಕುರಿತು ಚರ್ಚೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.