ಮೊಬೈಲ್ ಸಂಖ್ಯೆ ಪೋರ್ಟೆಬಲಿಟಿ (ಎಂಎನ್‌ಪಿ) ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಪರಿಷ್ಕರಿಸಿದೆ. ಎಂಎನ್‌ಪಿ ಅವಧಿಯನ್ನು ಕಡಿಮೆ ಮಾಡಲಾಗಿದೆ. ನೂತನ ಪ್ರಕ್ರಿಯೆಯು ಡಿಸೆಂಬರ್ 16ರಿಂದ ಜಾರಿಯಾಗಲಿದೆ
3 ದಿನ:ಸೇವಾ ಸಂಸ್ಥೆಯು ಎಂಎಂಪಿ ಪ್ರಕ್ರಿಯೆ ಪೂರ್ಣಗೊಳಿಸಲು ತೆಗೆದುಕೊಳ್ಳಬಹುದಾದ ಗರಿಷ್ಠ ಅವಧಿ (ಈಗ ಗರಿಷ್ಠ 8 ದಿನಗಳವರೆಗೆ ಅವಕಾಶವಿದೆ)
4 ದಿನ:ಎಂಎನ್‌ಪಿ ಮಾಡಿಕೊಳ್ಳಲು ಚಂದಾದಾರರು ಪಡೆಯು ವಿಶಿಷ್ಟ ಪೋರ್ಟ್ ಸಂಖ್ಯೆಯ (ಯೂನಿಕ್ ಪೋರ್ಟ್ ಕೋಡ್– ಯುಪಿಸಿ) ಗರಿಷ್ಠ ಅವಧಿ
* ಪೋಸ್ಟ್‌ಪೇಯ್ಡ್ ಗ್ರಾಹಕರು ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ ಯುಪಿಸಿ ದೊರೆಯುವುದಿಲ್ಲ
* ಯಾವುದೇ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಯಾವುದೇ ನ್ಯಾಯಾಲಯವು ಆದೇಶ ನೀಡಿದ್ದರೆ, ಆ ಸಂಖ್ಯೆಯನ್ನು ಪೋರ್ಟ್ ಮಾಡಲು ಯುಪಿಸಿ ಪಡೆಯಲು ಸಾಧ್ಯವಿಲ್ಲ
* ಪೋರ್ಟೆಬಲಿಟಿ ವ್ಯವಸ್ಥೆ ಬದಲಾಗುತ್ತಿರುವ ಕಾರಣ, ಡಿಸೆಂಬರ್ 11ರಿಂದ 15ರವೆರೆಗೆ ಯಾವುದೇ ಸಂಸ್ಥೆಯ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಿಲ್ಲ
ಆಧಾರ: ಟ್ರಾಯ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.