ADVERTISEMENT

ವಾಗ್ದಂಡನೆ ನಿರ್ಣಯ: ವಕೀಲರ ಹೊಸ ತಂಡ ಘೋಷಿಸಿದ ಡೊನಾಲ್ಡ್ ಟ್ರಂಪ್‌

ಪಿಟಿಐ
Published 1 ಫೆಬ್ರುವರಿ 2021, 6:41 IST
Last Updated 1 ಫೆಬ್ರುವರಿ 2021, 6:41 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಸೆನೆಟ್‌ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗುವ ವಾಗ್ದಂಡನೆ ನಿರ್ಣಯದ ವಿರುದ್ಧ ವಾದಿಸಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಕೀಲರ ತಂಡವನ್ನು ಘೋಷಿಸಿದ್ದಾರೆ.

ಫೆ. 8ರಂದು ವಾಗ್ದಂಡನೆ ನಿರ್ಣಯವನ್ನು ಮಂಡಿಸಲಾಗುತ್ತಿದೆ. ವಕೀಲರಾದ ಡೇವಿಡ್‌ ಶೋಯನ್‌ ಹಾಗೂ ಬ್ರೂಸ್‌ ಎಲ್‌.ಕ್ಯಾಸ್ಟರ್‌ ಜೂನಿಯರ್ ಎಂಬುವವರು ಈ ತಂಡದ ನೇತೃತ್ವ ವಹಿಸಲಿದ್ದಾರೆ.

‘ಟ್ರಂಪ್‌ ವಿರುದ್ಧ ಮಂಡಿಸಲಾಗುವ ವಾ‌ಗ್ದಂಡನೆ ನಿರ್ಣಯ ಅಸಾಂವಿಧಾನಿಕ. ಹೀಗಾಗಿ ಈ ವಿಷಯದಲ್ಲಿ ಟ್ರಂಪ್‌ ಪರ ವಾದ ಮಂಡನೆಗೆ ಅವಕಾಶ ಸಿಕ್ಕಿರುವುದು ನನಗೆ ಗೌರವ ತರುವ ವಿಷಯ’ ಎಂದು ಶೋಯನ್‌ ಹೇಳಿದ್ದಾರೆ.

ADVERTISEMENT

ಟ್ರಂಪ್‌ ಅವರು ಎರಡು ಬಾರಿ ವಾಗ್ದಂಡನೆ ಎದುರಿಸುತ್ತಿರುವ ಅಮೆರಿಕದ ಮೊದಲ ಅಧ್ಯ‌ಕ್ಷರಾಗಿದ್ದಾರೆ. ಅದರಲ್ಲೂ, ರಿಪಬ್ಲಿಕನ್‌ ಪಕ್ಷದ 10 ಜನ ಸಂಸದರು ಟ್ರಂಪ್‌ ವಿರುದ್ಧದ ವಾಗ್ದಂಡನೆಗೆ ಬೆಂಬಲ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.