ADVERTISEMENT

ಸೂಸನ್ ವೈಲ್ಸ್ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆ; ಟ್ರಂಪ್ ಘೋಷಣೆ

ಪಿಟಿಐ
Published 8 ನವೆಂಬರ್ 2024, 2:19 IST
Last Updated 8 ನವೆಂಬರ್ 2024, 2:19 IST
<div class="paragraphs"><p>ಸೂಸನ್ ವೈಲ್ಸ್, ಡೊನಾಲ್ಡ್ ಟ್ರಂಪ್</p></div>

ಸೂಸನ್ ವೈಲ್ಸ್, ಡೊನಾಲ್ಡ್ ಟ್ರಂಪ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರ ವ್ಯವಸ್ಥಾಪಕಿ ಸೂಸನ್ ವೈಲ್ಸ್, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ.

ADVERTISEMENT

ಆ ಮೂಲಕ ಸೂಸನ್ ವೈಲ್ಸ್, ಈ ಸ್ಥಾನಕ್ಕೆ ನೇಮಕಗೊಳ್ಳಲಿರುವ ಮೊದಲ ಮಹಿಳೆ ಎನಿಸಲಿದ್ದಾರೆ.

'ಶ್ರೇಷ್ಠ ಅಮೆರಿಕದತ್ತ ಮರಳಿಸಲು ಸೂಸಿ (ಸೂಸನ್) ದಣಿವರಿಯದೆ ಕೆಲಸ ಮುಂದುವರಿಸಲಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆಯಾಗಲಿರುವ ಮೊದಲ ಮಹಿಳೆ ಎನಿಸಲಿದ್ದು, ಸೂಸನ್‌ಗೆ ಅರ್ಹ ಗೌರವ ಸಿಗಲಿದೆ. ಆಕೆ ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಲಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಟ್ರಂಪ್ ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಯಶಸ್ವಿ ಅಭಿಯಾನದಲ್ಲಿ ಸೂಸನ್ ಗಮನಾರ್ಹ ಪಾತ್ರ ವಹಿಸಿದ್ದರು.

'ಅಮೆರಿಕದ ಇತಿಹಾಸದಲ್ಲೇ ಗಮನಾರ್ಹ ರಾಜಕೀಯ ಜಯ ಗಳಿಸಲು ಸೂಸನ್ ನನಗೆ ನೆರವಾಗಿದ್ದಾರೆ. 2016 ಹಾಗೂ 2020ರ ಅಭಿಯಾನಗಳಲ್ಲೂ ಅವರು ಅವಿಭಾಜ್ಯ ಅಂಗವಾಗಿದ್ದರು' ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೆ.ಡಿ. ವ್ಯಾನ್ಸ್ ಸಹ ಸೂಸನ್ ವೈಲ್ಸ್ ಅವರನ್ನು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.