ADVERTISEMENT

ಜೋ ಬೈಡನ್‌ನ ‘ವಿಮಾ ಪಾಲಿಸಿ’ ಇದ್ದಂತೆ: ಕಮಲಾ ಹ್ಯಾರಿಸ್‌ ವಿರುದ್ಧ ಟ್ರಂಪ್‌ ಲೇವಡಿ

ಪಿಟಿಐ
Published 10 ಜುಲೈ 2024, 14:13 IST
Last Updated 10 ಜುಲೈ 2024, 14:13 IST
ಕಮಲಾ ಹ್ಯಾರಿಸ್‌, ಡೊನಾಲ್ಡ್‌ ಟ್ರಂಪ್‌
ಕಮಲಾ ಹ್ಯಾರಿಸ್‌, ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷ ಚುನಾವಣಾ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದರು. 

ಹ್ಯಾರಿಸ್‌ ಅವರ ಸಾಮರ್ಥ್ಯವನ್ನು ಪ್ರಶ್ನಿಸಿರುವ ಟ್ರಂಪ್‌, ಅವರನ್ನು ಅಧ್ಯಕ್ಷ ಜೋ ಬೈಡನ್‌ ಅವರ ‘ವಿಮಾ ಪಾಲಿಸಿ’ ಎಂದು ವ್ಯಂಗ್ಯವಾಡಿದರು.

ಜೂನ್‌ 27ರಂದು ನಡೆದ ಚರ್ಚೆಯಲ್ಲಿ ಬೈಡನ್ ಅತ್ಯಂತ ಕಳಪೆ ಪ್ರದರ್ಶನ ತೋರಿದ ನಂತರ ಅವರು ಅಧ್ಯಕ್ಷ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಪಕ್ಷದ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಟ್ರಂಪ್‌ ಅವರು ಹ್ಯಾರಿಸ್‌ ವಿರುದ್ಧ ಕಿಡಿಕಾರಿದರು.

ADVERTISEMENT

ಫ್ಲಾರಿಡಾದಲ್ಲಿ ಮಾತನಾಡಿದ ಅವರು, ‘ಬೈಡನ್‌ ಅವರ ಒಂದು ನಿರ್ಧಾರವನ್ನು ಹಾಡಿ ಹೊಗಳಲೇಬೇಕು. ಬಹುಶಃ ಅತ್ಯಂತ ಚಾಣಾಕ್ಷ ನಿರ್ಧಾರ ಅದು. ಅವರು ಕಮಲಾ ಹ್ಯಾರಿಸ್‌ ಅವರನ್ನು ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಏಕೆಂದರೆ ಅದು ಅವರಿಗೆ ‘ವಿಮಾ ಪಾಲಿಸಿ’; ಬಹುಶಃ ನಾನು ಕಂಡ ಅತ್ಯುತ್ತಮ ವಿಮಾ ಪಾಲಿಸಿ’ ಎಂದರು.

ಒಂದು ವೇಳೆ ಬೈಡನ್‌ ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಂಡಿದ್ದರೆ, ಅವರೂ ಒಂದು ವರ್ಷದ ಹಿಂದೇ ಬೈಡನ್‌ ಅವರನ್ನು ಕಚೇರಿಯಿಂದ ಓಡಿಸುತ್ತಿದ್ದರು’ ಎನ್ನುತ್ತಾ ಹ್ಯಾರಿಸ್‌ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.