ADVERTISEMENT

US Election 2024: ಟ್ರಂಪ್, ಹ್ಯಾರಿಸ್ ಕೊನೆಯ ದಿನ ಬಿರುಸಿನ ಪ್ರಚಾರ

ಪಿಟಿಐ
Published 5 ನವೆಂಬರ್ 2024, 3:09 IST
Last Updated 5 ನವೆಂಬರ್ 2024, 3:09 IST
<div class="paragraphs"><p>ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್</p></div>

ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇಂದು (ನ.5) ಮತದಾನ ನಡೆಯಲಿದ್ದು, ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಕೊನೆಯ ದಿನವಾದ ಸೋಮವಾರ ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ADVERTISEMENT

7.8 ಕೋಟಿಗೂ ಹೆಚ್ಚು ಮಂದಿ ಈಗಾಗಲೇ 'ಮೇಲ್-ಇನ್' ಮೂಲಕ ಮತ ಚಲಾಯಿಸಿದ್ದಾರೆ ಎಂದು ಯುನಿವರ್ಸಿಟಿ ಆಫ್ ಫ್ಲೋರಿಡಾದ ಎಲೆಕ್ಷನ್ ಲ್ಯಾಬ್ ತಿಳಿಸಿದೆ.

ಅಮೆರಿಕದ ಅಧ್ಯಕ್ಷರಾಗಲು 270 ಎಲೆಕ್ಟರ್‌ಗಳ ಬೆಂಬಲ ಬೇಕಿದೆ. ಪೆನ್ಸಿಲ್ವೇನಿಯಾ, ಮಿಷಿಗನ್‌, ಅರಿಜೋನಾ, ನೆವಾಡ, ವಿಸ್ಕಾನ್‌ಸಿನ್‌, ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾ ನಿರ್ಣಾಯಕ ರಾಜ್ಯಗಳಾಗಿವೆ.

ಕಮಲಾ ಹ್ಯಾರಿಸ್, ಕೊನೆಯ ದಿನ ಪೆನ್ಸಿಲ್ವೇನಿಯಾದಲ್ಲಿ ಐದು ರ್‍ಯಾಲಿಗಳಲ್ಲಿ ಭಾಗವಹಿಸಿದರು.

'ನನ್ನ ಅಮ್ಮ ಶ್ಯಾಮಲಾ ಗೋಪಾಲನ್ ಹ್ಯಾರಿಸ್ 19ನೇ ವಯಸ್ಸಿನಲ್ಲಿ ಭಾರತದಿಂದ ಅಮೆರಿಕಕ್ಕೆ ಬಂದಿದ್ದರು. ಅವರು ನನಗೆ ಮತ್ತು ನನ್ನ ಸಹೋದರಿ ಮಾಯಾ ಅವರಿಗೆ ಧೈರ್ಯ ಮತ್ತು ಮನಸಂಕಲ್ಪದ ಬಗ್ಗೆ ಕಲಿಸಿಕೊಟ್ಟರು. ನಮ್ಮನ್ನು ಮುನ್ನಡೆಸಲು ನಾನೀಗಲೇ ತಯಾರಾಗಿದ್ದೇನೆ. ಅಮ್ಮನಿಗೆ ಧನ್ಯವಾದಗಳು' ಎಂದು ಕಮಲಾ ಹ್ಯಾರಿಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ಡೊನಾಲ್ಡ್ ಟ್ರಂಪ್, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ ಮತ್ತು ಮಿಷಿಗನ್‌ನಲ್ಲಿ ನಾಲ್ಕು ಚುನಾವಣಾ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.

'ನಾವೆಲ್ಲರೂ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಮಹತ್ವದ ರಾಜಕೀಯ ದಿನದ ಸನಿಹದಲ್ಲಿದ್ದು, 'ಗ್ರೇಟ್ ಅಮೆರಿಕ' ಪುನಃಸ್ಥಾಪಿಸಲು ನೀವೆಲ್ಲರೂ ಮತ ಚಲಾಯಿಸಬೇಕು' ಎಂದು ಟ್ರಂಪ್ ಮನವಿ ಮಾಡಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ಹ್ಯಾರಿಸ್ ಗೆದ್ದರೆ, ಅಮೆರಿಕದ ಅಧ್ಯಕ್ಷರಾಗುವ ಮೊದಲ ಮಹಿಳೆ, ಮೊದಲ ಕಪ್ಪು ಜನಾಂಗದ ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎನಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.