ADVERTISEMENT

ಟ್ರಂಪ್‌ ವಿರುದ್ಧ ವಾಗ್ದಂಡನೆ: ವಾರಾಂತ್ಯದಲ್ಲಿ ತೀರ್ಪು ಬರುವ ಸಾಧ್ಯತೆ

ಏಜೆನ್ಸೀಸ್
Published 13 ಫೆಬ್ರುವರಿ 2021, 11:22 IST
Last Updated 13 ಫೆಬ್ರುವರಿ 2021, 11:22 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಈ ವಾರಾಂತ್ಯದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ದಾಂಡನೆಯ ಕುರಿತಂತೆ ಸೆನೆಟ್‌ ತೀರ್ಪು ನೀಡುವ ಸಾಧ್ಯತೆ ಇದೆ.

ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಂಡಿಸಲಾದ ವಾಗ್ದಂಡನೆ ನಿರ್ಣಯದ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಲಾಗಿದ್ದು, ಕ್ಯಾಪಿಟಲ್ ಹಿಲ್‌ ಮೇಲೆ ನಡೆದ ದಾಳಿಯಲ್ಲಿ ಡೊನಾಲ್ಡ್‌ ಟ್ರಂಪ್‌ ಹೊಣೆಯಲ್ಲ ಎಂದು ಟ್ರಂಪ್‌ ಪರ ವಕೀಲರು ವಾದಿಸಿದ್ದಾರೆ.

‘ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಂಡಿಸಿರುವ ವಾಗ್ದಂಡನೆಯು ಅಸಂವಿಧಾನಿಕವಾಗಿದೆ. ಇದು ರಾಜಕೀಯ ದ್ವೇಷದ ನಡೆಯಾಗಿದೆ. ಹಾಗಾಗಿ ಸೆನೆಟ್‌, ವಾಗ್ದಂಡನೆಯನ್ನು ತಿರಸ್ಕರಿಸುವ ಪರವಾಗಿ ಮತ ಚಲಾಯಿಸಬೇಕು’ ಎಂದು ಟ್ರಂಪ್‌ ಪರ ವಕೀಲ ಮೈಕೆಲ್ ವ್ಯಾನ್ ಡೆರ್ ವೀನ್ ಅವರು ಶುಕ್ರವಾರ ವಾದ ಮಂಡಿಸಿದ್ದಾರೆ.

ADVERTISEMENT

ಆದರೆ, ಇದರ ವಿರುದ್ಧ ವಾದ ಮಂಡಿಸಿರುವ ಡೆಮಾಕ್ರಾಟಿಕ್‌ ಪಕ್ಷದ ಪರ ವಕೀಲರು, ‘ನವೆಂಬರ್‌ 3 ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌, ಜೋ ಬೈಡನ್‌ ವಿರುದ್ಧ ಸೋಲು ಅನುಭವಿಸಿದರು. ಇದರಿಂದಾಗಿ ಟ್ರಂಪ್‌, ತಮ್ಮ ರ‍್ಯಾಲಿಗಳಲ್ಲಿ ಚುನಾವಣೆಯಲ್ಲಿ ಅಕ್ರಮ ನಡೆದಿರುವುದಾಗಿ ಹೇಳಿ ಜನರ ದಾರಿ ತಪ್ಪಿಸಿದರು ಮತ್ತು ಅವರನ್ನು ಪ್ರಚೋದಿಸಿದರು’ ಎಂದಿದ್ದಾರೆ.

‘ಜನವರಿ 6ರಂದು ಟ್ರಂಪ್‌, ಶ್ವೇತ ಭವನದ ಬಳಿ ರ‍್ಯಾಲಿ ಕೈಗೊಂಡಿದ್ದರು. ಆ ರ‍್ಯಾಲಿಯಲ್ಲಿ ಅವರು ಕ್ಯಾಪಿಟಲ್‌ ಹಿಲ್ ಮೇಲೆ ದಾಳಿ ನಡೆಸುವಂತೆ ಕರೆ ನೀಡಿದರು’ ಎಂದು ವ್ಯವಸ್ಥಾಪಕರು ಆರೋಪಿಸಿದ್ದಾರೆ.

‘ಈ ಹಿಂಸಾಚಾರದ ಬಗ್ಗೆ ಟ್ರಂಪ್‌ ಅವರು ಒಮ್ಮೆಯೂ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ.ಅವರು ಬಹಳ ಅಪಾಯಕಾರಿ ವ್ಯಕ್ತಿ. ಹಾಗಾಗಿ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.