ADVERTISEMENT

ನಿರೀಕ್ಷೆಯಂತೆ ಟ್ರಂಪ್‌ ಚೇತರಿಸಿಕೊಳ್ಳುತ್ತಿದ್ದಾರೆ: ವೈದ್ಯರ ಹೇಳಿಕೆ

ಪಿಟಿಐ
Published 21 ಜುಲೈ 2024, 2:26 IST
Last Updated 21 ಜುಲೈ 2024, 2:26 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ಗುಂಡೇಟಿಗೆ ಒಳಗಾಗಿ ಗಾಯಗೊಂಡಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರೀಕ್ಷೆಯಂತೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಟ್ರಂಪ್‌ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ರೋನಿ ಎಲ್‌. ಜಾಕ್ಸನ್‌ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಡಾ. ರಾನಿ, ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿದ್ದಾಗ ಅವರ ವೈದ್ಯರಾಗಿ ಕೆಲಸ ಮಾಡಿದ್ದರು. ಈ ಕುರಿತು ಮಾತನಾಡಿದ ಅವರು, ‘ಟ್ರಂಪ್‌ ಅವರನ್ನು ನ್ಯೂಜೆರ್ಸಿಯ ಬೆಡ್‌ಮಿನ್‌ಸ್ಟರ್‌ನಲ್ಲಿ ವೈಯಕ್ತಿಕವಾಗಿ ಭೇಟಿಯಾಗಿರುವೆ. ಅವರಿಗಾದ ಗಾಯವನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದೇನೆ. ಅವರೊಂದಿಗೆ ಸದಾ ಇರುತ್ತೇನೆ. ಟ್ರಂಪ್‌ ಅವರು ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.

‘ಟ್ರಂಪ್‌ ಅವರ ಬಲ ಕಿವಿಗೆ 2 ಸೆಂ.ಮೀನಷ್ಟು ಅಗಲದ ಗಾಯವಾಗಿದೆ. ಆರಂಭದಲ್ಲಿ ರಕ್ತಸ್ರಾವ ಕಾಣಿಸಿಕೊಂಡಿತ್ತು, ಜತೆಗೆ ಕಿವಿಯ ಮೇಲ್ಬಾಗದಲ್ಲಿ ಊತವಿತ್ತು. ಆದರೆ ಈಗ ಊತ ಕಡಿಮೆಯಾಗಿದ್ದು, ಗಾಯವು ವಾಸಿಯಾಗಲು ಆರಂಭಿಸಿದೆ. ಗಾಯಕ್ಕೆ ಯಾವುದೇ ಹೊಲಿಗೆಗಳನ್ನು ಹಾಕಲಾಗಿಲ್ಲ’ ಎಂದೂ ಅವರು ತಿಳಿಸಿದ್ದಾರೆ

ಕಳೆದ ಶನಿವಾರ (ಜುಲೈ 13) ಪೆನ್ಸಿಲ್ವೇನಿಯಾದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಈ ವೇಳೆ ಪ್ರೇಕ್ಷಕನೊಬ್ಬ ಮೃತಪಟ್ಟು, ಟ್ರಂಪ್‌ ಸೇರಿದಂತೆ ಮೂವರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.