ಪೆನ್ಸಿಲ್ವೆನಿಯಾ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಚಾರ ತಂತ್ರಗಳು ಜೋರಾಗಿಯೇ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡಿದ್ದಾರೆ.
ಈ ಕುರಿತಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮೆಕ್‌ಡೊನಾಲ್ಡ್ಸ್‌ನಲ್ಲಿ ಫ್ರಂಚ್ ಫ್ರೈಸ್‌ಗಳನ್ನು ಮಾಡುವ ಮತ್ತು ಕೌಂಟರ್‌ನಲ್ಲಿ ನಿಂತು ಗ್ರಾಹಕರಿಗೆ ಅವರು ಆರ್ಡರ್ ಮಾಡಿದ್ದ ಆಹಾರವನ್ನು ನೀಡುವ ದೃಶ್ಯಗಳನ್ನು ವಿಡಿಯೊದಲ್ಲಿ ಕಾಣಬಹುದು.
ಕೌಂಟರ್ ಬಳಿ ಬಂದ ದಂಪತಿ, ಟ್ರಂಪ್ ಅವರನ್ನು ಕಂಡು ‘ನಮಸ್ತೆ’ ಎಂದಿದ್ದಾರೆ. ಭಾರತ ಮೂಲದ ಈ ದಂಪತಿಗೆ ಫ್ರೆಂಚ್‌ಫ್ರೈಸ್ ನೀಡಿದ ಟ್ರಂಪ್ ಮಾತುಕತೆ ನಡೆಸಿದರು.
ಟ್ರಂಪ್‌ಗೆ ಹಸ್ತಲಾಘವ ಮಾಡಿದ ದಂಪತಿ, ‘ಧನ್ಯವಾದಗಳು ಮಿಸ್ಟರ್ ಪ್ರೆಸಿಡೆಂಟ್’ ಎಂದೇ ಸಂಬೋಧಿಸಿದ್ದಾರೆ. ‘ನಮ್ಮಂತಹ ಸಾಮಾನ್ಯರೂ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗಿದೆ. ನೀವು ಇನ್ನೊಮ್ಮೆ ಅಧ್ಯಕ್ಷರಾಗಲೆಂದು ಪ್ರಾರ್ಥಿಸುತ್ತೇವೆ’ ಎಂದಿದ್ದಾರೆ.
ಟ್ರಂಪ್ ಅವರ ಈ ನಡೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾಡುತ್ತಿರುವ ತಂತ್ರ ಎಂದು ವಿಡಿಯೊ ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.