ವಾಷಿಂಗ್ಟನ್ : ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಖ್ಯಾತ ಅಂತರರಾಷ್ಟ್ರೀಯ ಹೂಡಿಕೆದಾರ ಸ್ಕಾಟ್ ಬೆಸ್ಸೆಂಟ್ ಅವರನ್ನು ಖಜಾಂಚಿ ಕಾರ್ಯದರ್ಶಿಯಾಗಿ
ನಾಮನಿರ್ದೇಶನ ಮಾಡಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ಸಂಸದೆ ಲೋರಿ ಚಾವೇಜ್ ಡಿರೇಮರ್ ಅವರನ್ನು ಲೇಬರ್ ಕಾರ್ಯದರ್ಶಿಯಾಗಿ ಮತ್ತು ಡಾ.ಜನ್ಯಾಟ್ ನೆಶಿವಾಟ್ ಅವರನ್ನು ಅಮೆರಿಕದ ಮುಂದಿನ ಸರ್ಜನ್ ಜನರಲ್ ಆಗಿ ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಅಲೆಕ್ಸ್ ವಾಂಗ್ ಅವರನ್ನು ಪ್ರಧಾನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತು ಡಾ. ಸೆಬ್ಯಾಸ್ಟೀನ್ ಗೋರ್ಕಾ ಅವರನ್ನು ಭಯೋತ್ಪಾದನೆ ನಿಗ್ರಹ ದಳದ ಹಿರಿಯ ನಿರ್ದೇಶಕರಾಗಿ ನೇಮಕ ಮಾಡಿದ್ದಾರೆ.
ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕರಾಗಿ ಮಾಜಿ ಸಂಸದ ಡಾ.ಡೇವ್ ವೆಲ್ಡನ್ ಅವರನ್ನು ಮತ್ತು ಆಹಾರ ಮತ್ತು ಔಷಧ ಮಂಡಳಿಯ (ಎಫ್‌ಡಿಎ) ನಿರ್ದೇಶಕರಾಗಿ ಮಾರ್ಟಿ ಮಾಕರೆ ಅವರನ್ನು ಆಯ್ಕೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.