ವಾಷಿಂಗ್ಟನ್: ವಿದೇಶಾಂಗ ಕಾರ್ಯದರ್ಶಿಯಾಗಿ ಸಂಸದ ಮಾರ್ಕೊ ರುಬಿಯೊ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮೈಕ್ ವಾಟ್ಜ್ ಅವರನ್ನು ನೇಮಿಸಲು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ತೀರ್ಮಾನಿಸಿದ್ದಾರೆ.
ಮೈಕೊ ರುಬಿಯೊ ಅವರು ಫ್ಲಾರಿಡಾದ ಸಂಸದರಾಗಿದ್ದು, ಭಾರತದ ಪರ ಸ್ನೇಹ ಧೋರಣೆ ಹೊಂದಿದ್ದಾರೆ. ಭಾರತ–ಅಮೆರಿಕ ಬಾಂಧವ್ಯ ಬಲಪಡಿಸಲು ಒತ್ತು ನೀಡಿದ್ದಾರೆ. 50 ವರ್ಷದ ವಾಟ್ಜ್ ಅವರು ಈ ಹಿಂದೆ ಭಾರತ ಮತ್ತು ಭಾರತೀಯ ಅಮೆರಿಕನ್ನರ ಸಂಸತ್ ಸಮಿತಿಯ ಸಹ ಅಧ್ಯಕ್ಷರಾಗಿ ಹಲವು ವರ್ಷ ಕಾರ್ಯನಿರ್ವಹಿಸಿದ್ದರು.
ಆಯಕಟ್ಟಿನ ಸ್ಥಾನಗಳಿಗೆ ಈ ಇಬ್ಬರನ್ನೂ ಆಯ್ಕೆ ಮಾಡಿರುವುದು ಟ್ರಂಪ್ ಅವರ ಎರಡನೇ ಅಧಿಕಾರಾವಧಿಯಲ್ಲಿ ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರ ಸಂಕೇತ ಎಂದು ಹೇಳಲಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರನ ನೇಮಕಕ್ಕೆ ಸೆನಟ್ ಅನುಮೋದನೆ ಅಗತ್ಯವಿಲ್ಲ. ನೇಮಕಾತಿಗೆ ತಿರ್ಮಾನ ಕುರಿತಂತೆ ಟ್ರಂಪ್ ಪರವಾಗಿ ಅಧಿಕೃತ ಹೇಳಿಕೆಯನ್ನು ನೀಡಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.