ADVERTISEMENT

‘ಹೇಡಿ’ಯ ಮಾಹಿತಿ ನೀಡಿ: ಟ್ರಂಪ್‌

ಏಜೆನ್ಸೀಸ್
Published 7 ಸೆಪ್ಟೆಂಬರ್ 2018, 18:54 IST
Last Updated 7 ಸೆಪ್ಟೆಂಬರ್ 2018, 18:54 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌:ಸಂಪಾದಕೀಯ ಪುಟದಲ್ಲಿ ಸರ್ಕಾರ ಮತ್ತು ತಮ್ಮ ವಿರುದ್ಧ ಲೇಖನ ಬರೆದ ‘ಹೇಡಿ’ಯ ಹೆಸರು ಬಹಿರಂಗಪಡಿಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಗೆ ತಾಕೀತು ಮಾಡಿದ್ದಾರೆ.

ಪತ್ರಿಕೆಯ ಬುಧವಾರದ ಸಂಪಾದಕೀಯ ಪುಟದಲ್ಲಿ ಟ್ರಂಪ್‌ ವಿರುದ್ಧ ಲೇಖನ ಪ್ರಕಟವಾಗಿತ್ತು. ಆದರೆ, ಬರೆದವರ ಹೆಸರನ್ನು ಪತ್ರಿಕೆ ಹಾಕಿರಲಿಲ್ಲ. ಕೇವಲ ಸಹಿ ಹಾಕದ ‘ಹಿರಿಯ ಅಧಿಕಾರಿ’ ಎಂದು ನಮೂದಿಸಲಾಗಿತ್ತು. ಟ್ರಂಪ್‌ ಸರ್ಕಾರದ ಭ್ರಷ್ಟಾಚಾರವನ್ನು ಎತ್ತಿ ಹಿಡಿದಿದ್ದ ಈ ಲೇಖನದಲ್ಲಿ, ಆಡಳಿತಾತ್ಮಕ ಹಾಗೂ ರಾಜಕೀಯ ಸೂಕ್ಷ್ಮವಿಚಾರಗಳು, ರಾಷ್ಟ್ರೀಯ ಭದ್ರತೆಯ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಈ ಲೇಖನ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ಬಿಕ್ಕಟ್ಟಿಗೂ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಲೇಖನ ಬರೆದವರು ಯಾರೋ ಗೊತ್ತಿಲ್ಲ. ಆದರೆ, ಇಂತಹ ಕೃತ್ಯಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ತರುತ್ತವೆ’ ಎಂದು ಟ್ರಂಪ್‌ ಹೇಳಿದ್ದಾರೆ.

ADVERTISEMENT

‘ಮಾಹಿತಿ ನೀಡಿದ ಅಧಿಕಾರಿಗಳ ಹೆಸರುಗಳನ್ನಾದರೂ ಪತ್ರಿಕೆ ಪ್ರಕಟಿಸಬೇಕಿತ್ತು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಇದು ಅಗತ್ಯವಾಗಿತ್ತು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.