ADVERTISEMENT

ಟ್ರಂಪ್‌ ಅಧಿಕಾರಕ್ಕೆ ಬಂದರೆ ಸಾವಿರಾರು ಸಿಬ್ಬಂದಿ ವಜಾ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 14:05 IST
Last Updated 16 ಫೆಬ್ರುವರಿ 2024, 14:05 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಮರಳಿದರೆ ಫೆಡರಲ್‌ ಸರ್ಕಾರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಟ್ರಂಪ್‌ ಮತ್ತೆ ಅಧಿಕಾರಕ್ಕೆ ಬಂದರೆ ಅಮೆರಿಕದಲ್ಲಿರುವ ಲಕ್ಷಾಂತರ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ, ಕೆಲ ಸರ್ಕಾರಿ ಏಜೆನ್ಸಿಗಳನ್ನು ರದ್ದುಪಡಿಸುವ ಸಾಧ್ಯತೆಗಳಿವೆ. ಅಲ್ಲದೆ ಹತ್ತಾರು ಸಾವಿರ ಸಿಬ್ಬಂದಿಯನ್ನು ವಜಾಗೊಳಿಸಿ, ಅವರ ಜಾಗಕ್ಕೆ ತನ್ನ ನಿಷ್ಠರನ್ನು ನೆಮಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ವಾಷಿಂಗ್ಟನ್‌ನಲ್ಲಿರುವ ಲಿಬರಲ್‌ ಸಂಘಟನೆಗಳು ಅಧ್ಯಕ್ಷ ಜೋ ಬೈಡನ್‌ಗೆ ಬೆಂಬಲ ನೀಡುತ್ತಿದ್ದು, ಟ್ರಂಪ್‌ ಸೋಲಬೇಕು ಎಂದು ಬಯಸುತ್ತಿವೆ. ಈ ನಿಟ್ಟಿನಲ್ಲಿ ಅವು ಸದ್ದಿಲ್ಲದೆ ಕಾರ್ಯ ನಿರ್ವಹಣೆಯಲ್ಲಿ ತೊಡಗಿವೆ. 

ADVERTISEMENT

ಟ್ರಂಪ್‌ ಅವರನ್ನು ಮತ್ತೆ ಅಧಿಕಾರಕ್ಕೆ ತಂದು, ಸಂಪ್ರದಾಯವಾದಿಗಳ ಸರ್ಕಾರ ರಚಿಸುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ‘ಪ್ರಾಜೆಕ್ಟ್‌ 2025’ ಹೆಸರಿನಲ್ಲಿ ಪ್ರಚಾರಾಂದೋಲನದಲ್ಲಿ ತೊಡಗಿದ್ದಾರೆ. ಇದಕ್ಕೆ ಪ್ರತಿತಂತ್ರಗಳನ್ನು ರೂಪಿಸುವಲ್ಲಿ ಬೈಡನ್‌ ಬೆಂಬಲಿಗರು, ವಕೀಲರು, ಕಾನೂನು ತಜ್ಞರು ಕಾರ್ಯನಿರತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.