ADVERTISEMENT

ಸ್ವಂತದ ಸಾಮಾಜಿಕ ಮಾಧ್ಯಮ ‘ಟ್ರೂಥ್‌ ಸೋಶಿಯಲ್‌’ ಬಿಡುಗಡೆ ಮಾಡಿದ ಟ್ರಂಪ್‌

ರಾಯಿಟರ್ಸ್
Published 21 ಫೆಬ್ರುವರಿ 2022, 9:27 IST
Last Updated 21 ಫೆಬ್ರುವರಿ 2022, 9:27 IST
‘ಟ್ರೂಥ್‌ ಸೋಶಿಯಲ್‌’ ಆ್ಯಪ್‌ ಹಿನ್ನೆಲೆಯಲ್ಲಿ ಡೊನಾಲ್ಡ್‌ ಟ್ರಂಪ್‌ (ಎಎಫ್‌ಪಿ ಚಿತ್ರ)
‘ಟ್ರೂಥ್‌ ಸೋಶಿಯಲ್‌’ ಆ್ಯಪ್‌ ಹಿನ್ನೆಲೆಯಲ್ಲಿ ಡೊನಾಲ್ಡ್‌ ಟ್ರಂಪ್‌ (ಎಎಫ್‌ಪಿ ಚಿತ್ರ)   

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸಾಮಾಜಿಕ ಮಾಧ್ಯಮ 'ಟ್ರೂತ್ ಸೋಶಿಯಲ್ (Truth Social)’ ಅನ್ನು ಆ್ಯಪಲ್‌ ‘ಆಪ್ ಸ್ಟೋರ್‌’ನಲ್ಲಿ ಬಿಡುಗಡೆ ಮಾಡಲಾಗಿದೆ.

ಭಾನುವಾರ ಮಧ್ಯರಾತ್ರಿಯೇ ಆ್ಯಪ್‌ ಬಿಡುಗಡೆಯಾಗಿದೆ. ಈ ಮೊದಲೇ ಬೇಡಿಕೆ ಸಲ್ಲಿಸಿದವರ ಆ್ಯಪಲ್‌ ಫೋನ್‌ಗಳಲ್ಲಿ ಅಪ್ಲಿಕೇಷನ್‌ ಸ್ವಯಂಚಾಲಿತವಾಗಿ ಡೌನ್‌ಲೋಡ್‌ ಆಗಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ‌

ADVERTISEMENT

2021ರ ಅಮೆರಿಕದ ಕ್ಯಾಪಿಟಲ್ ಮೇಲಿನ ದಾಳಿಯ ನಂತರ ಟ್ರಂಪ್ ಅವರ ಟ್ವಿಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ ಖಾತೆಗಳನ್ನು ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಾವೇ ಪ್ರತ್ಯೇಕ ಸಾಮಾಜಿಕ ಮಾಧ್ಯಮವನ್ನು ಆರಂಭಿಸುವ ಸಂಕಲ್ಪವನ್ನು ಟ್ರಂಪ್‌ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.