ADVERTISEMENT

7.7 ತೀವ್ರತೆಯ ಭೂಕಂಪ; ಸುನಾಮಿ ಖಚಿತ ಪಡಿಸಿದ ಆಸ್ಟ್ರೇಲಿಯಾ ಹವಾಮಾನ ಇಲಾಖೆ

ಏಜೆನ್ಸೀಸ್
Published 10 ಫೆಬ್ರುವರಿ 2021, 17:08 IST
Last Updated 10 ಫೆಬ್ರುವರಿ 2021, 17:08 IST
ಸಮುದ್ರದಲ್ಲಿ ಅಲೆಗಳ ಅಬ್ಬರ–ಸಾಂದರ್ಭಿಕ ಚಿತ್ರ
ಸಮುದ್ರದಲ್ಲಿ ಅಲೆಗಳ ಅಬ್ಬರ–ಸಾಂದರ್ಭಿಕ ಚಿತ್ರ   

ಸಿಡ್ನಿ: ದಕ್ಷಿಣ ಪೆಸಿಫಿಕ್‌ನಲ್ಲಿ 7.7ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಸುನಾಮಿ ಸೃಷ್ಟಿಯಾಗಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

'ಸುನಾಮಿ ಎದ್ದಿರುವುದು ಖಚಿತಪಟ್ಟಿದೆ' ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಟ್ವೀಟಿಸಿದೆ.

ಆಸ್ಟ್ರೇಲಿಯಾದ ಪೂರ್ವದಲ್ಲಿ 550 ಕಿ.ಮೀ. ದೂರದಲ್ಲಿರುವ ಲಾರ್ಡ್‌ ಹೋವ್‌ ದ್ವೀಪಕ್ಕೆ ಅಪಾಯವಾಗುವ ಮುನ್ಸೂಚನೆಯನ್ನು ನೀಡಿದೆ.

ADVERTISEMENT


ದಕ್ಷಿಣ ಪೆಸಿಫಿಕ್‌ನಲ್ಲಿ 7.7ರಷ್ಟು ತೀವ್ರತೆಯ ಭೂಕಂಪ ಆಗಿರುವುದರಿಂದ ನ್ಯೂಜಿಲೆಂಡ್‌, ನ್ಯೂ ಕೆಲೆಡೋನಿಯಾ ಸೇರಿದಂತೆ ಇತರೆ ದ್ವೀಪ ರಾಷ್ಟ್ರಗಳಲ್ಲಿ ಸುನಾಮಿ ಸೃಷ್ಟಿಯಾಗಬಹುದಾದ ಸಾಧ್ಯತೆ ಇರುವುದಾಗಿ ಅಮೆರಿಕದ ಜಿಯೊಲಾಜಿಕಲ್‌ ಸರ್ವೆ ತಿಳಿಸಿದೆ.

ಮಧ್ಯರಾತ್ರಿ ನ್ಯೂ ಕೆಲೆಡೋನಿಯಾದಲ್ಲಿ ವಾವೊದ ಪೂರ್ವ ಸುಮಾರು 415 ಕಿ.ಮೀ. ದೂರದಲ್ಲಿ ಭೂಮಿ ಕಂಪಿಸಿರುವುದಾಗಿ ಹೇಳಿದೆ.

ಮುಂದಿನ ಮೂರು ಗಂಟೆಗಳಲ್ಲಿ ಅಪಾಯಕಾರಿಯಾಗಬಹುದಾದ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಮತ್ತೊಂದು ಸಂಸ್ಥೆ ಮುನ್ಸೂಚನೆ ನೀಡಿದೆ.

ಭೂಕಂಪ ಸಂಭವಿಸಿರುವ ಸ್ಥಳ–ಕೃಪೆ: USGS

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.