ADVERTISEMENT

ಗಾಜಾ ಯುದ್ಧ: ಇಸ್ರೇಲ್ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿದ ಟರ್ಕಿ

ಏಜೆನ್ಸೀಸ್
Published 3 ಮೇ 2024, 3:20 IST
Last Updated 3 ಮೇ 2024, 3:20 IST
<div class="paragraphs"><p>ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್</p></div>

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್

   

ರಾಯಿಟರ್ಸ್ ಚಿತ್ರ

ಅಂಕರಾ: ಗಾಜಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವಿರೋಧಿಸಿ ಇಸ್ರೇಲ್‌ ಜೊತೆಗಿನ ಆಮದು–ರಫ್ತನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾಗಿ ಟರ್ಕಿಯ ವ್ಯಾಪಾರ ಸಚಿವಾಲಯ ತಿಳಿಸಿದೆ.

ADVERTISEMENT

‘ಇಸ್ರೇಲ್ ಜೊತೆಗಿದ್ದ ಆಮದು––ರಫ್ತು ಸಂಬಂಧವನ್ನು ಕಡಿತಗೊಳಿಸಲಾಗಿದೆ. ಇದು ಎಲ್ಲಾ ಉತ್ಪನ್ನಗಳಿಗೂ ಅನ್ವಯವಾಗಲಿದೆ’ ಎಂದು ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಇಸ್ರೇಲ್ ವಿರುದ್ಧ ತೆಗೆದುಕೊಳ್ಳುತ್ತಿರುವ ಎರಡನೇ ಕ್ರಮ ಇದು ಎಂದು ಹೇಳಿರುವ ಟರ್ಕಿ, ಗಾಜಾಗೆ ಮಾನವೀಯ ನೆರವು ಅನುಮತಿಸುವವರೆಗೂ ಇನ್ನಷ್ಟು ನಿರ್ಬಂಧಗಳು ಹೇರಲಿದ್ದೇವೆ ಎಂದು ತಿಳಿಸಿದೆ.

ಕಳೆದ ತಿಂಗಳು ಇಸ್ರೇಲ್‌ಗೆ ಅಲ್ಯಮಿನಿಯಂ, ಸ್ಟೀಲ್‌, ಕಟ್ಟಡ ಕಾಮಗಾರಿ ಸಂಬಂಧಿತ ಉತ್ಪನ್ನಗಳು ಸೇರಿ ಒಟ್ಟು 54 ಬಗೆಯ ಉತ್ಪನ್ನಗಳನ್ನು ರಫ್ತನ್ನು ಟರ್ಕಿ ಸ್ಥಗಿತಗೊಳಿಸಿತ್ತು.

ಟರ್ಕಿಯ ಈ ಕ್ರಮಕ್ಕೆ ಇಸ್ರೇಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಟರ್ಕಿ ಒಪ್ಪಂದಗಳನ್ನು ಮುರಿಯುತ್ತಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.