ಜಿನೀವಾ (ರಾಯಿಟರ್ಸ್): ಟರ್ಕಿಯಲ್ಲಿ ಭೂಕಂಪದಿಂದ ಆಗಿರುವ ಹಾನಿ ಅಂದಾಜು ₹8.17 ಲಕ್ಷ ಕೋಟಿಗೂ (100 ಬಿಲಿಯನ್ ಡಾಲರ್) ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ ಅಧಿಕಾರಿ ಹೇಳಿದ್ದಾರೆ.
ಮಾರ್ಚ್ 16ರಂದು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಪ್ರಮುಖ ದಾನಿಗಳ ಸಮಾವೇಶಕ್ಕೂ ಮೊದಲು ಮಂಗಳವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅಧಿಕಾರಿ ಲೂಯಿಸಾ ವಿಂಟನ್ ಈ ವಿಷಯ ತಿಳಿಸಿದರು.
ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದ ಲಕ್ಷಾಂತರ ಮನೆಗಳು ನಾಶವಾಗಿವೆ. ತುರ್ತು ಅಗತ್ಯಗಳು ಅಪಾರವಾಗಿವೆ. ಆದರೆ, ಸಂಪನ್ಮೂಲಗಳು ವಿರಳವಾಗಿವೆ ಎಂದು ಅವರು ಹೇಳಿದರು.
ಫೆಬ್ರುವರಿ 6ರಂದು ಸಂಭವಿಸಿದ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ 52 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.