ಎಪಿ
ಇಸ್ತಾಂಬುಲ್: ದೇಶದಲ್ಲಿ ವಾರ ಪೂರ್ತಿ ನಡೆದ ಕಾರ್ಯಾಚರಣೆಯಲ್ಲಿ, ಐಎಸ್ ಉಗ್ರ ಸಂಘಟನೆಯ ನಂಟು ಹೊಂದಿದ್ದ 70 ಜನರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಟರ್ಕಿಯ ಗೃಹ ಸಚಿವ ಅಲಿ ಯೆರ್ಲಿಕಯ ಗುರುವಾರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಯಾಚರಣೆ ವೇಳೆ ಬೃಹತ್ ಪ್ರಮಾಣದ ನಗದು, ವಿದ್ಯುನ್ಮಾನ ವಸ್ತುಗಳು, ಹವಾಲಾ ವಹಿವಾಟು ಕುರಿತ ದಾಖಲೆಗಳು ದೊರೆತಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.