ಅಂಕರಾ: ಮಾರ್ಚ್ 31ರಂದು ನಿಗದಿಯಾಗಿರುವ ಸ್ಥಳೀಯ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿರಲಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ತಿಳಿಸಿದ್ದಾಗಿ ಸರ್ಕಾರಿ ಮಾಧ್ಯಮ ಏಜೆನ್ಸಿ ‘ಅನಡೊಲು’ ಶುಕ್ರವಾರ ವರದಿ ಮಾಡಿದೆ.
ಎರ್ಡೊಗನ್ ಟರ್ಕಿಯ ಅತ್ಯಂತ್ಯ ಯಶಸ್ವಿ ರಾಜಕಾರಣಿ ಎನಿಸಿಕೊಂಡಿದ್ದು, ಎರಡು ದಶಕಗಳಿಗೂ ಅಧಿಕ ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. 2002ರ ಬಳಿಕ ಈವರೆಗೂ 12ಕ್ಕೂ ಅಧಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. 2023ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು.
‘ಇದು ನನ್ನ ಕೊನೆಯ ಚುನಾವಣೆ. ಇದರ ಫಲಿತಾಂಶವು ನನ್ನ ನಂತರ ಬರುವ ನನ್ನ ಸಹೋದರರಿಗೆ ಈ ಪರಂಪರೆಯನ್ನು ವರ್ಗಾಯಿಸುತ್ತದೆ’ ಎಂದು ಅವರು ಹೇಳಿದ್ದಾಗಿ ಅನಡೊಲು ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.