ಅಂಕಾರಾ (ಎಪಿ): ರಕ್ಷಣಾ ಉತ್ಪಾದನೆ ಕಂಪನಿ ಮೇಲೆ ದಾಳಿ ನಡೆಸಿ ಐದು ಮಂದಿ ಸಾವಿಗೆ ಕಾರಣರಾದ ಕುರ್ದಿಶ್ ಬಂಡುಕೋರ ಸಂಘಟನೆಗಳ ಮೇಲೆ ಟರ್ಕಿ ಸೇನೆ ಗುರುವಾರವೂ ದಾಳಿ ಮುಂದುವರಿಸಿದೆ. ಎರಡನೇ ದಿನ ಸಿರಿಯಾ, ಇರಾಕ್‌ನ ಕುರ್ದಿಶ್ ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ, ಸಿರಿಯಾದ ಕುರ್ದಿಶ್ ಬಂಡುಕೋರ ಸಂಘಟನೆಗಳ ‘ಅತ್ಯಂತ ಪ್ರಮುಖ ಕಾರ್ಯಸ್ಥಳ’ಗಳ ಮೇಲೆ ಟರ್ಕಿಯು ದಾಳಿ ನಡೆಸಿದೆ. ಇದರಲ್ಲಿ ಸೇನೆ, ಗುಪ್ತಚರ, ಇಂಧನ, ಮೂಲಸೌಕರ್ಯ, ಶಸ್ತ್ರಾಸ್ತ್ರ ಸಂಗ್ರಹಾಗಾರಗಳು ಕೂಡ ಸೇರಿವೆ’ ಎಂದು ‘ಅನಡೋಲು’ ಸುದ್ದಿಸಂಸ್ಥೆ ವರದಿ ಮಾಡಿದೆ. ಗುರುವಾರದ ದಾಳಿ ವೇಳೆ ಸೇನೆಯು ಶಸ್ತ್ರಾಸ್ತ್ರ ಹೊಂದಿದ ಡ್ರೋನ್‌ಗಳನ್ನು ಬಳಸಿಕೊಂಡಿದೆ. ಸಾವು–ನೋವಿನ ಕುರಿತು ವರದಿಯಾಗಿಲ್ಲ.
ಟರ್ಕಿಯ ರಕ್ಷಣಾ ಉಪಕರಣಗಳ ಉತ್ಪಾದನಾ ಕಂಪನಿ ಟಿಯುಎಸ್‌ಎಎಸ್ ಗುರಿಯಾಗಿಸಿ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು. ಈ ದಾಳಿಗೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಕಾರಣವೆಂದು ಟರ್ಕಿ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.