ಸ್ಯಾನ್ ಫ್ರಾನ್ಸಿಸ್ಕೊ (ಅಮೆರಿಕಾ): ಪ್ರತಿಷ್ಠಿತ ಸಾಮಾಜಿಕ ಜಾಲತಾಣ ಟ್ವಿಟರ್‌ನ ಸಿಇಒ ಜಾಕ್ ಡಾರ್ಸೆ ಅವರು ವಾರದಲ್ಲಿ ಕೇವಲ ಏಳು ಬಾರಿ ಆಹಾರ ಸ್ವೀಕರಿಸುವುದಾಗಿ ಹೇಳಿದ್ದಾರೆ.
ರಾತ್ರಿ ಊಟವನ್ನಷ್ಟೇ ಸೇವಿಸುವ ಮೂಲಕ ನಾನು ಮಾನಸಿಕವಾಗಿ ತೀಕ್ಷ್ಣವಾಗಿದ್ದೇನೆ ಎಂದು ವೈರ್ಡ್ ಸುದ್ದಿ ಸಂಸ್ಥೆಯ ಯುಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಡಾರ್ಸೆ ತಿಳಿಸಿದ್ದಾರೆ.
ಧ್ಯಾನ ಮತ್ತು ಉಪವಾಸಗಳು ತಮ್ಮ ಜೀವನ ಶೈಲಿಯನ್ನು ಅಚ್ಚುಕಟ್ಟಾಗಿಸಿವೆ ಎಂದಿರುವ ಅವರು ಪ್ರತಿ ದಿನ ಮ೦ಜುಗಡ್ಡೆಯಲ್ಲಿ ಸ್ನಾನ ಮಾಡುವುದನ್ನು ರೂಢಿಗತವಾಗಿಸಿಕೊಂಡಿದ್ದಾರೆ.
ರಾತ್ರಿ ಊಟದಲ್ಲಿ ಮೀನು, ಬೇಯಿಸಿದ ಕೋಳಿ ಮಾಂಸ ಮತ್ತು ಅಧಿಕವಾಗಿ ಸೊಪ್ಪು ಬಳಸುವುದಾಗಿ ಈ ಹಿಂದೆ ಹೇಳಿಕೊಂಡಿದ್ದ ಡಾರ್ಸೆ ಊಟದ ನಂತರ ಬೆರ್ರಿ ಹಣ್ಣು ಮತ್ತು ಕಪ್ಪು ಚಾಕೊಲೇಟ್ ತಿನ್ನುತ್ತೇನೆ ಎಂದಿದ್ದಾರೆ.
‘ಪ್ರತಿ ದಿನ ಎರಡು ಗಂಟೆಗಳ ದ್ಯಾನ, ಮಂಜುಗಡ್ಡೆ ಸ್ನಾನ ಮತ್ತು ಉಪವಾಸದಿಂದ ನಾನು ತುಂಬಾ ನಿರಾಳ ಮತ್ತು ತೀಕ್ಷ್ಣವಾಗಿರುತ್ತೇನೆ. ಇದರಿಂದ ನನಗೆ ಕೆಲಸದ ಮೇಲೆ ಏಕಾಗ್ರತೆ ಹೊಂದಲು ಸಹಾಯವಾಗುತ್ತದೆ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನರ ಅಚ್ಚರಿಗೆ ಟ್ವಿಟರ್ ಸಿಇಒ ಕಾರಣವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.