ADVERTISEMENT

ಮಾಲ್ದೀವ್ಸ್‌ ಅಧ್ಯಕ್ಷರ ಭಾರತ ಭೇಟಿಗೂ ಮುನ್ನ ಮೋದಿ ಟೀಕಿಸಿದ್ದ ಸಚಿವರ ರಾಜೀನಾಮೆ

ರಾಯಿಟರ್ಸ್
Published 11 ಸೆಪ್ಟೆಂಬರ್ 2024, 12:56 IST
Last Updated 11 ಸೆಪ್ಟೆಂಬರ್ 2024, 12:56 IST
ಮೊಹಮ್ಮದ್‌ ಮುಯಿಜು
ಮೊಹಮ್ಮದ್‌ ಮುಯಿಜು   

ಕೊಲಂಬೋ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವರ್ಷದ ಆರಂಭದಲ್ಲಿ ಅಮಾನತುಗೊಂಡಿದ್ದ ಮಾಲ್ದೀವ್ಸ್‌ ಸರ್ಕಾರದ ಇಬ್ಬರು ಕಿರಿಯ ಸಚಿವರು, ಅಧ್ಯಕ್ಷ ಮೊಹಮ್ಮದ್ ಮಾಯಿಝಿ ಅವರ ಭಾರತ ಭೇಟಿಗೆ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ.

ಮಲ್ಶಾ ಶರೀಫ್ ಮತ್ತು ಮರಿಯಮ್ ಶಿಯುನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆದರೆ, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

ಶೀಘ್ರದಲ್ಲೇ ಅಧ್ಯಕ್ಷ ಮುಯಿಝು ಅವರು ನವದೆಹಲಿಗೆ ಭೇಟಿ ನೀಡಲಿದ್ದಾರೆ ಎಂಬ ಸರ್ಕಾರದ ವಕ್ತಾರರೊಬ್ಬರ ಹೇಳಿಕೆ ಉಲ್ಲೇಖಿಸಿ ಮಂಗಳವಾರ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

ADVERTISEMENT

ಇ‌ದೇ ವರ್ಷ ಜನವರಿಯಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಅಲ್ಲಿ ಕಳೆದ ಕ್ಷಣಗಳ ವಿಡಿಯೊ ಮತ್ತು ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಭೇಟಿಯ ಕುರಿತಂತೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದ ಮಾಲ್ದೀವ್ಸ್‌ ಸಚಿವರಾದ ಮಲ್ಶಾ ಶರೀಫ್, ಮರಿಯಮ್‌ ಶಿಯುನಾ ಮತ್ತು ಮಹಜೂಮ್ ಮಜೀದ್ ಅವರು ಪ್ರಧಾನಿ ಮೋದಿ ಮತ್ತು ಭಾರತವನ್ನು ಕಟುವಾದ ಶಬ್ದಗಳಿಂದ ಟೀಕಿಸಿದ್ದರು.

ಹೇಳಿಕೆ ಕುರಿತು ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮಾಲ್ಡೀವ್ಸ್ ಸರ್ಕಾರ ಮೂವರು ಸಚಿವರನ್ನು ಅಮಾನತುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.