ADVERTISEMENT

ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿ ಆರೋಪ: ರಷ್ಯಾದಲ್ಲಿ ಇಬ್ಬರು ಪತ್ರಕರ್ತರ ಬಂಧನ

ಏಜೆನ್ಸೀಸ್
Published 29 ಏಪ್ರಿಲ್ 2024, 12:47 IST
Last Updated 29 ಏಪ್ರಿಲ್ 2024, 12:47 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಲಂಡನ್: ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ರಷ್ಯಾದ ಇಬ್ಬರು ಪತ್ರಕರ್ತರನ್ನು ಅಲ್ಲಿನ ಸರ್ಕಾರ ಬಂಧಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್‌, ಪ್ರಕರಣದ ತನಿಖೆ ಹಾಗೂ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಸ್ಥಾಪಿಸಿದ್ದ ಸಂಘಟನೆ ಪರವಾಗಿ ಕೆಲಸ ಮಾಡಿದ ಆರೋಪ ಕುರಿತ ವಿಚಾರಣೆ ಬಾಕಿ ಇರುವುದರಿಂದ ಅವರನ್ನು ಮತ್ತಷ್ಟು ದಿನ ಪೊಲೀಸ್‌ ವಶಕ್ಕೆ ನೀಡಿದೆ. 

ADVERTISEMENT

ಕೊನ್‌ಸ್ಟಾಂಟಿನ್‌ ಗಬೋವ್‌ ಮತ್ತು ಸೆರ್ಗೆ ಕರೆಲಿನ್‌ ಇಬ್ಬರೂ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ನವಾಲ್ನಿ ಸ್ಥಾಪಿತ ನಿಷೇಧಿತ ಯುಟ್ಯೂಬ್ ಚಾನಲ್‌ಗೆ ಕಂಟೆಂಟ್‌ ಸಿದ್ಧಪಡಿಸಿದ ಆರೋಪ ಗಬೋವ್ ಮತ್ತು ಕರೆಲಿನ್‌ ಅವರ ಮೇಲಿದೆ. 

ಆರೋಪಕ್ಕೆ ಸಂಬಂಧಿಸಿದಂತೆ ಅವರಿಗೆ ಕನಿಷ್ಠ  ಎರಡು ವರ್ಷ ಅಥವಾ ಗರಿಷ್ಠ ಆರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.