ADVERTISEMENT

ಫಿಲಿಪ್ಪೀನ್ಸ್‌: ಚಂಡಮಾರುತ– 19 ಮಂದಿ ಸಾವು

ಏಜೆನ್ಸೀಸ್
Published 18 ಡಿಸೆಂಬರ್ 2021, 12:19 IST
Last Updated 18 ಡಿಸೆಂಬರ್ 2021, 12:19 IST
ಮಧ್ಯ ಫಿಲಿಪ್ಪೀನ್ಸ್‌ನ ಗ್ರಾಮವೊಂದರಲ್ಲಿ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ ಜನರನ್ನು ಕರಾವಳಿ ರಕ್ಷಣಾ ಸಿಬ್ಬಂದಿ ರಕ್ಷಿಸಿದರು  –ಎಪಿ ಚಿತ್ರ 
ಮಧ್ಯ ಫಿಲಿಪ್ಪೀನ್ಸ್‌ನ ಗ್ರಾಮವೊಂದರಲ್ಲಿ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ ಜನರನ್ನು ಕರಾವಳಿ ರಕ್ಷಣಾ ಸಿಬ್ಬಂದಿ ರಕ್ಷಿಸಿದರು  –ಎಪಿ ಚಿತ್ರ    

ಮನಿಲಾ, ಫಿಲಿಪ್ಪೀನ್ಸ್‌: ದ್ವೀಪ ರಾಷ್ಟ್ರದಲ್ಲಿ ಬೀಸಿದ ಪ್ರಬಲ ಚಂಡಮಾರುತದಿಂದಾಗಿ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ. ದಿಢೀರ್‌ ಪ್ರವಾಹ ಉಂಟಾದ ಕಾರಣ, ದೇಶದ ಕೇಂದ್ರ ಭಾಗದಲ್ಲಿ ವಿದ್ಯುತ್‌ ಹಾಗೂ ಸಂವಹನ ಕಡಿತಗೊಂಡಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಚಂಡಮಾರುತದಿಂದ ಮಧ್ಯ ಫಿಲಿಪ್ಪೀನ್ಸ್‌ನಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಭಾರಿ ಗಾಳಿಯಿಂದ ಮನೆಗಳ ಚಾವಣಿಗಳು ಹಾರಿದ್ದು, ಹಲವೆಡೆ ಮರಗಳು ಉರುಳಿ ದಕ್ಷಿಣ ಮತ್ತು ಮಧ್ಯ ದ್ವೀಪ ಪ್ರಾಂತ್ಯಗಳಲ್ಲಿ ವಿದ್ಯುತ್‌ ಕಡಿತಗೊಂಡಿದೆ. ಹೋಟೆಲ್‌, ವಿಮಾನ ನಿಲ್ದಾಣವೊಂದರ ಕಟ್ಟಡಗಳು ಹಾನಿಗೊಂಡಿವೆ.

ಚಂಡಮಾರುತವು ಶುಕ್ರವಾರ ರಾತ್ರಿ ದಕ್ಷಿಣ ಚೀನಾ ಸಮುದ್ರಕ್ಕೆ ಅಪ್ಪಳಿಸಿತು. ನಂತರ ಇದು ದಕ್ಷಿಣ ಮತ್ತು ಮಧ್ಯ ದ್ವೀಪಗಳ ಪ್ರಾಂತ್ಯದ ಕಡೆ ಸಾಗಿತು. ಮುನ್ನೆಚ್ಚರಿಕೆಯಾಗಿ ಇಲ್ಲಿಯ 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಇದರಿಂದ ಹೆಚ್ಚಿನ ಪ್ರಾಣಹಾನಿ ತಪ್ಪಿಸಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.