ADVERTISEMENT

Typhoon Shanshan | ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ; ಮೂರು ಸಾವು

ರಾಯಿಟರ್ಸ್
Published 29 ಆಗಸ್ಟ್ 2024, 6:14 IST
Last Updated 29 ಆಗಸ್ಟ್ 2024, 6:14 IST
<div class="paragraphs"><p>ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ</p></div>

ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ

   

(ರಾಯಿಟರ್ಸ್ ಚಿತ್ರ)

ಟೋಕಿಯೊ: ನೈಋತ್ಯ ಜಪಾನ್‌‌ನ ಕಾಗೋಶಿಮಾ ಪ್ರಾಂತ್ಯಕ್ಕೆ 'ಶಾನ್‌ಶಾನ್' (Shanshan) ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಚಂಡುಮಾರುತದಲ್ಲಿ ಒಬ್ಬರು ನಾಪತ್ತೆಯಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆ ಹಾಗೂ ಬಿರುಸಿನ ಗಾಳಿಯಿಂದಾಗಿ ಅನೇಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ದೈತ್ಯ ಸಂಸ್ಥೆಗಳಾದ ಟೊಯೊಟಾ ಹಾಗೂ ನಿಸ್ಸಾನ್, ತನ್ನ ಘಟಕಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ನೈಋತ್ಯ ಕ್ಯುಶು ದ್ವೀಪ ಪ್ರದೇಶದಲ್ಲಿ ಗಂಟೆಗೆ 198 ಕಿ.ಮೀ. ವೇಗದಲ್ಲಿ ಚಂಡಮಾರುತ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಅತ್ಯಂತ ಪ್ರಬಲ ಚಂಡಮಾರುತದ ಎಚ್ಚರ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಲಕ್ಷಾಂತರ ಮಂದಿಗೆ ಸೂಚನೆ ನೀಡಿದ್ದಾರೆ.

2.5 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ ಉಂಟಾಗಿದೆ. ಚಂಡಮಾರುತವು ವಾರಾಂತ್ಯದಲ್ಲಿ ರಾಜಧಾನಿ ಟೋಕಿಯೊ ಸೇರಿದಂತೆ ಮಧ್ಯ ಮತ್ತು ಪೂರ್ವ ಪ್ರದೇಶಗಳಿಗೆ ವ್ಯಾಪಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ಜಪಾನ್ ಏರ್‌ಲೈನ್ಸ್, ಎಎನ್‌ಎ ಹೋಲ್ಡಿಂಗ್ಸ್ ಸೇರಿದಂತೆ ವಿಮಾನಯಾನ ಸಂಸ್ಥೆಗಳು 600ಕ್ಕೂ ಹೆಚ್ಚು ದೇಶೀಯ ವಿಮಾನಗಳನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ. ಕ್ಯುಶು ದ್ವೀಪದ ಹಲವೆಡೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.