ADVERTISEMENT

ಭಾರತದಲ್ಲಿ ವಿದೇಶಿ ದೇಣಿಗೆ ರದ್ದಾದ ಸೇವಾ ಸಂಸ್ಥೆಗಳ ಮಾಹಿತಿ ಕೇಳಿದ ಬ್ರಿಟನ್‌

ಪಿಟಿಐ
Published 7 ಜನವರಿ 2022, 15:53 IST
Last Updated 7 ಜನವರಿ 2022, 15:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿ ಭಾರತದಲ್ಲಿ ನೋಂದಣಿ ನಿರಾಕರಿಸಿರುವ ಎನ್‌ಜಿಒಗಳ ನಿರ್ದಿಷ್ಟ ಸಂಖ್ಯೆಯನ್ನು ಮತ್ತು ಮಾಹಿತಿಯನ್ನು ಒದಗಿಸುವಂತೆ ಭಾರತಕ್ಕೆ ಬ್ರಿಟನ್‌ ಸರ್ಕಾರ ಕೇಳಿರುವುದಾಗಿ ಸಂಸತ್ತಿನ ಚರ್ಚೆಯೊಂದರ ವೇಳೆ ಸದಸ್ಯರಿಗೆ ತಿಳಿಸಲಾಯಿತು.

ಗುರುವಾರ ಬ್ರಿಟನ್‌ ಮೇಲ್ಮನೆಯಲ್ಲಿ ಸದಸ್ಯರ ಚರ್ಚೆಯ ವೇಳೆ ಸದಸ್ಯ ಹ್ಯಾರಿಸ್‌ ಅವರು, ‘ಭಾರತವು ಸೇವಾ ಸಂಸ್ಥೆಗಳು ಮತ್ತು ಇತರ ಸರ್ಕಾರೇತರ ಸಂಸ್ಥೆಗಳಿಗೆ ಸಾಗರೋತ್ತರ ನಿಧಿಯನ್ನು ಸ್ಥಗಿತಗೊಳಿಸಿರುವುದಕ್ಕೆ ಬ್ರಿಟನ್‌ ಸರ್ಕಾರ ಏನು ಕ್ರಮ ಕೈಗೊಂಡಿದೆ?’ ಎಂದು ಪ್ರಶ್ನಿಸಿದರು.

ಕೋಲ್ಕತ್ತದಲ್ಲಿ ಮದರ್‌ ತೆರೇಸಾ ಅವರು ಸ್ಥಾಪಿಸಿದ ಸೇವಾ ಸಂಸ್ಥೆ ಮತ್ತು ಇತರ ಸರ್ಕಾರೇತರ ಸಂಸ್ಥೆಗಳಿಗೆ ಎಫ್‌ಸಿಆರ್‌ಎ ಅನ್ನು ನವೀಕರಣ ಮಾಡುವುದನ್ನು ನಿರಾಕರಿಸಲಾಗಿತ್ತು.

ADVERTISEMENT

‘ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಯಡಿ ಭಾರತದಲ್ಲಿನ ಕೆಲವು ಸರ್ಕಾರೇತರ ಸಂಸ್ಥೆಗಳು ಸಂಕಷ್ಟ ಅನುಭವಿಸುತ್ತಿರುವುದು ನಮಗೆ ಅರಿವಿದೆ. ಅಲ್ಲದೆ ಕೆಲವು ಸಂಸ್ಥೆಗಳು ಸಲ್ಲಿಸಿದ್ದ ವಿದೇಶಿ ದೇಣಿಗೆ ಪರವಾನಗಿ ನವೀಕರಣ ಅರ್ಜಿಗಳು ತಿರಸ್ಕೃತಗೊಂಡಿವೆ’ ಎಂದು ಬ್ರಿಟನ್‌ ಸರ್ಕಾರದ ವಿದೇಶಾಂಗ ಸಚಿವರ ಪರವಾಗಿ ಸದಸ್ಯ ಲಾರ್ಡ್‌ ತಾರಿಕ್‌ ಅಹ್ಮದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.