ಲಂಡನ್: ಗೂಢಚಾರಿಕೆಆರೋಪಕ್ಕೆ ಸಂಬಂಧಿಸಿದಂತೆವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡಲು ಬ್ರಿಟನ್ ಸರ್ಕಾರ ಸಮ್ಮತಿಸಿದೆ. ಈ ಕುರಿತು ಅಸ್ಸಾಂಜೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಅಸ್ಸಾಂಜೆ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಬಹುದೆಂದು ಏಪ್ರಿಲ್‌ನಲ್ಲಿ ಬ್ರಿಟನ್ ನ್ಯಾಯಾಲಯದ ತೀರ್ಪು ನೀಡಿತ್ತು. ಅದರಂತೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಶುಕ್ರವಾರ ಹಸ್ತಾಂತರ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ಅವರ ಇಲಾಖೆ ತಿಳಿಸಿದೆ.
ಅಸ್ಸಾಂಜೆ ಅವರು ಅಮೆರಿಕಕ್ಕೆ ಸಂಬಂಧಿಸಿದ, ದಶಕಕ್ಕೂ ಹಿಂದಿನ ವರ್ಗೀಕೃತ ದಾಖಲೆಗಳ ಬೃಹತ್ ಸಂಗ್ರಹವನ್ನು ವಿಕಿಲೀಕ್ಸ್ ಮೂಲಕ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕ ಅವರ ವಿರುದ್ಧ ಗೂಢಚಾರಿಕೆಯ ಆರೋಪ ಹೊರಿಸಿ, ಅಸ್ಸಾಂಜೆಯನ್ನು ತನಗೆ ಒಪ್ಪಿಸುವಂತೆ ಕೇಳಿಕೊಂಡಿತ್ತು.
ಸದ್ಯ ಅಸ್ಸಾಂಜೆ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಕುರಿತು ಬ್ರಿಟನ್ ಸರ್ಕಾರ ಆದೇಶ ನೀಡಿದ್ದು, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಸ್ಸಾಂಜೆಗೆ 14 ದಿನಗಳ ಕಾಲಾವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.