ಲಂಡನ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಜನನಿಬಿಡ ಪ್ರದೇಶವನ್ನು ರಷ್ಯಾ ಗುರಿಯಾಗಿಸುತ್ತಿದೆ ಎಂದು ಬ್ರಿಟನ್ ಮಿಲಿಟರಿ ಗುಪ್ತಚರ ಇಲಾಖೆ ಭಾನುವಾರ ಹೇಳಿಕೆ ನೀಡಿದೆ.
ಆದರೆ ಉಕ್ರೇನ್ ಪ್ರತಿರೋಧದ ಶಕ್ತಿಯು ರಷ್ಯಾವನ್ನು ಅಚ್ಚರಿಗೊಳಿಸಿದ್ದು, ಮುನ್ನಡೆಯನ್ನು ನಿಧಾನಗೊಳಿಸುತ್ತಿದೆ ಎಂದು ಹೇಳಿದೆ.
ಹಾರ್ಕಿವ್, ಮರಿಯುಪೋಲ್ ನಗರಗಳು ಸೇರಿದಂತೆ ಹಲವೆಡೆ ಜನನಿಬಿಡ ಪ್ರದೇಶಗಳನ್ನು ರಷ್ಯಾ ಗುರಿಯಾಗಿಸಿಕೊಳ್ಳುತ್ತಿದೆ ಎಂದು ತಿಳಿಸಿದೆ.
2016ರಲ್ಲಿ ಸಿರಿಯಾದಲ್ಲೂ ರಷ್ಯಾ ಇದೇ ರೀತಿಯ ಯುದ್ಧ ತಂತ್ರವನ್ನು ಬಳಕೆ ಮಾಡಿತ್ತು ಎಂದು ಬ್ರಿಟನ್ ಮಿಲಿಟರಿ ಗುಪ್ತಚರಇಲಾಖೆ ವರದಿ ಮಾಡಿದೆ.
ಇನ್ನೊಂದೆಡೆ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂಬ ಆರೋಪವನ್ನು ರಷ್ಯಾ ಪದೇ ಪದೇ ನಿರಾಕರಿಸುತ್ತಲೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.