ಲಂಡನ್ : ದ್ವೇಷ ಭಾಷಣ ಹಾಗೂ ಅವಹೇಳನಕಾರಿ ವಿಷಯ ಪ್ರಸಾರ ಮಾಡಿದ್ದರಿಂದ, ವಿವಾದಾತ್ಮಕ ಇಸ್ಲಾಂ ಬೋಧಕ ಝಾಕೀರ್ ನಾಯ್ಕ ಒಡೆತನ ಪೀಸ್ ಟಿ.ವಿ ನೆಟ್‌ವರ್ಕ್‌ಗೆ ₹ 2.75 ಕೋಟಿ (3 ಲಕ್ಷ ಪೌಂಡ್) ವಿಧಿಸಲಾಗಿದೆ.
ಟಿ.ವಿ ಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲೆ ನಿಗಾ ವಹಿಸುವ ಬ್ರಿಟನ್ ಆಫ್‌ಕಾಮ್ ಈ ದಂಡ ವಿಧಿಸಿದೆ. ಪೀಸ್ ಟಿ.ವಿ ಉರ್ದು ಪರವಾನಗಿ ಹೊಂದಿರುವವರಿಗೆ ₹ 1.83 ಕೋಟಿ (2 ಲಕ್ಷ ಪೌಂಡ್), ಪೀಸ್ ಟಿ.ವಿಗೆ ₹ 92 ಲಕ್ಷ (1 ಲಕ್ಷ ಪೌಂಡ್) ದಂಡ ವಿಧಿಸಲಾಗಿದೆ.
ಹಣ ಅಕ್ರಮ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಝಾಕೀರ್ ನಾಯ್ಕ 2016ರಲ್ಲಿ ಭಾರತ ಬಿಟ್ಟು ಹೋಗಿ ಸದ್ಯ ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಆತನನ್ನು ಹಸ್ತಂತರಿಸುವಂತೆ ಭಾರತ ಕಳೆದ ವಾರ ಮಲೇಷ್ಯಾಕ್ಕೆ ಮನವಿ ಮಾಡಿದೆ.
ದೇಶ ಪ್ರವೇಶಿಸದಂತೆ 2010ರಲ್ಲಿ ನಾಯ್ಕ ಮೇಲೆ ಬ್ರಿಟನ್ ಸಹ ನಿಷೇಧ ಹೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.