ADVERTISEMENT

ಗಾಜಾಕ್ಕೆ ನೆರವು: ಪ್ರತಿಕ್ರಿಯಿಸಲು ನಿರಾಕರಿಸಿದ ಬ್ರಿಟನ್‌

ಏಜೆನ್ಸೀಸ್
Published 27 ಏಪ್ರಿಲ್ 2024, 15:32 IST
Last Updated 27 ಏಪ್ರಿಲ್ 2024, 15:32 IST
<div class="paragraphs"><p>ಬ್ರಿಟನ್‌ ಬಾವುಟ</p></div>

ಬ್ರಿಟನ್‌ ಬಾವುಟ

   

ಲಂಡನ್: ಅಮೆರಿಕ ನಿರ್ಮಾಣ ಮಾಡುತ್ತಿರುವ ಹಡಗುತಾಣದ ಮೂಲಕ ಬ್ರಿಟಿಷ್ ಸೇನೆಯು ಗಾಜಾಕ್ಕೆ ನೆರವು ನೀಡಬಹುದು ಎಂದು ಶನಿವಾರ ಬಿಬಿಸಿ ವರದಿ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಬ್ರಿಟನ್‌ ನಿರಾಕರಿಸಿದೆ.

‘ಬ್ರಿಟಿಷ್ ಸರ್ಕಾರವು ಅಗತ್ಯ ವಸ್ತುಗಳನ್ನು ತುಂಬಿದ ಟ್ರಕ್‌ಗಳ ರವಾನೆಗೆ ಸೇನೆಯನ್ನು ನಿಯೋಜಿಸಲು ಯೋಜನೆ ರೂಪಿಸುತ್ತಿದೆ. ಆದರೆ ಈ ಬಗ್ಗೆ ಪ್ರಧಾನಿ ರಿಷಿ ಸುನಕ್‌ ಅವರ ಎದುರು ಯಾವುದೇ ಪ್ರಸ್ತಾವನೆಗಳಿಲ್ಲ ಮತ್ತು ಈವರೆಗೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ’ ಎಂದು ಬಿಬಿಸಿ ವರದಿ ಮಾಡಿದೆ.

ADVERTISEMENT

‘ಮತ್ತೊಂದು ರಾಷ್ಟ್ರವು  ಟ್ರಕ್‌ಗಳನ್ನು ತಲುಪಿಸಲು ಸಿಬ್ಬಂದಿಯನ್ನು ಒದಗಿಸುತ್ತದೆ ಆದರೆ ಅಮೆರಿಕ ಇದರಲ್ಲಿ ಭಾಗಿಯಾಗುವುದಿಲ್ಲ’ ಎಂದು ಅಮೆರಿಕದ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ.

ಹಡಗುತಾಣವನ್ನು ನಿರ್ಮಿಸಲು ಬ್ರಿಟನ್‌ ಈಗಾಗಲೇ ಸಹಕಾರ ನೀಡಿದ್ದು, ನೂರಾರು ಸೈನಿಕರು ಮತ್ತು ಕೆಲಸಗಾರರು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಸ್ರೇಲ್‌ ದಾಳಿಯಿಂದಾಗಿ ಗಾಜಾವು ಸಂಕಷ್ಟಕ್ಕೀಡಾಗಿದ್ದು, ಅಪಾರ ನಷ್ಟ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.