ಲಂಡನ್: 30 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಬ್ರಿಟನ್ ಸರ್ಕಾರ ಭಾನುವಾರ ಹೇಳಿದೆ.
‘ಬೂಸ್ಟರ್ ಲಸಿಕೆಗೆ ಸಂಬಂಧಿಸಿಸೋಮವಾರದಿಂದ ಬುಕಿಂಗ್ ಆರಂಭಿಸಲಾಗುವುದು. ದೇಶದಲ್ಲಿ ಕೊರೊನಾ ವೈರಸ್‌ನ ಓಮೈಕ್ರಾನ್ ತಳಿ ಸೋಂಕು ವೇಗವಾಗಿ ಪ್ರಸರಣವಾಗುತ್ತಿರುವ ಕಾರಣ ಬೂಸ್ಟರ್ ನೀಡಲು ನಿರ್ಧರಿಸಲಾಗಿದೆ’ ಎಂದು ಬ್ರಿಟನ್‌ನ ಆರೋಗ್ಯ ಇಲಾಖೆ ತಿಳಿಸಿದೆ.
‘ಲಸಿಕೆಯ ಬೂಸ್ಟರ್ ಡೋಸ್ ಓಮೈಕ್ರಾನ್ ತಳಿ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎಂಬುದು ಇತ್ತೀಚಿನ ಅಂಕಿ–ಅಂಶಗಳಿಂದ ತಿಳಿದುಬಂದಿದೆ. ಹೀಗಾಗಿ ಅರ್ಹ ನಾಗರಿಕರಿಗೆ ತ್ವರಿತವಾಗಿ ಬೂಸ್ಟರ್ ಡೋಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.