ADVERTISEMENT

ಉಕ್ರೇನ್‌ಗೆ ಆರ್ಥಿಕ ನೆರವು: ಬೈಡನ್‌ಗೆ ಸಿಗದ ಬೆಂಬಲ

ಪಿಟಿಐ
Published 1 ಅಕ್ಟೋಬರ್ 2023, 17:13 IST
Last Updated 1 ಅಕ್ಟೋಬರ್ 2023, 17:13 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್: ಯುದ್ಧ ಪೀಡಿತ ಉಕ್ರೇನ್‌ಗೆ ಆರ್ಥಿಕ ನೆರವು ನೀಡಬೇಕೆಂಬ ಅಧ್ಯಕ್ಷ ಜೋ ಬೈಡನ್ ನಿಲುವಿಗೆ ಸಂಸತ್‌ನಲ್ಲಿ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಆದರೆ, ಉಕ್ರೇನ್ ಬೆಂಬಲಿಸುವ ಸಂಸದರು ಈ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ರಷ್ಯಾ–ಉಕ್ರೇನ್ ನಡುವಿನ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಉಕ್ರೇನ್ ಸಹಾಯಕ್ಕೆ ಅನುಮೋದನೆ ಪಡೆಯುವುದು ಹೆಚ್ಚು ಕಷ್ಟ ಎಂಬುದನ್ನು ಸಂಸದರು ಒಪ್ಪಿಕೊಳ್ಳುತ್ತಾರೆ.

ಉಕ್ರೇನ್ ಸೈನಿಕರಿಗೆ ತರಬೇತಿ ನೀಡಲು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಲು ರಕ್ಷಣಾ ವೆಚ್ಚ ಮಸೂದೆಯಿಂದ 300 ಮಿಲಿಯನ್ ಡಾಲರ್ ನೀಡದಂತೆ ರಿಪಬ್ಲಿಕನ್‌ ಸದಸ್ಯರು ಮತ ಚಲಾಯಿಸಿದರು. ನಂತರ ಹಣವನ್ನು ಪ್ರತ್ಯೇಕವಾಗಿ ಅನುಮೋದಿಸಲಾಯಿತು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.