ADVERTISEMENT

ಪೂರ್ವ ಡೊನೆಟ್‌ಸ್ಕ್‌ನ 4ನೇ ಗ್ರಾಮ ಮರು ವಶ: ಉಕ್ರೇನ್ 

ಎ‍ಪಿ
Published 12 ಜೂನ್ 2023, 11:35 IST
Last Updated 12 ಜೂನ್ 2023, 11:35 IST
ಮಿಲಿಟರಿ ಅಧಿಕಾರಿಗಳೊಂದಿಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ
ಮಿಲಿಟರಿ ಅಧಿಕಾರಿಗಳೊಂದಿಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ   –ಎಪಿ/ಪಿಟಿಐ ಚಿತ್ರ

ಕೀವ್‌: ರಷ್ಯಾ ಪಡೆಗಳಿಂದ ಮತ್ತೊಂದು ಗ್ರಾಮವನ್ನು ಮರಳಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

ಸ್ಟೊರೊಜೋವ್ ಗ್ರಾಮದ ಮೇಲೆ  ಉಕ್ರೇನ್ ಧ್ವಜ ಮತ್ತೆ ಹಾರುತ್ತಿದೆ ಎಂದು ಉಪ ರಕ್ಷಣಾ ಸಚಿವ ಹನ್ನಾ ಮಲಿಯರ್ ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ.  

ಇದಕ್ಕೂ ಮುನ್ನ ಉಕ್ರೇನ್ ಅಧಿಕಾರಿಗಳು, ಪೂರ್ವ ಡೊನೆಟೆಸ್ಕ್‌ ಪ್ರದೇಶದ ವೆಲ್ಕಾ ನೊವಸಿಲ್ಕೆ ಪಟ್ಟಣದ ದಕ್ಷಿಣ ಭಾಗದಲ್ಲಿ ಮೂರು ಇತರೆ ಸಣ್ಣ ಗ್ರಾಮಗಳು ವಿಮೋಚನೆಗೊಂಡಿವೆ ಎಂದು ತಿಳಿಸಿದ್ದಾರೆ. ಈ ಗ್ರಾಮಗಳು ವ್ರೆಮಿವ್ಕಾ ಲೆಡ್ಜ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿವೆ.

ADVERTISEMENT

ರಷ್ಯಾ ರಕ್ಷಣಾ ಸಚಿವಾಲಯವು ಹಳ್ಳಿಗಳಿಂದ ರಷ್ಯಾ ಪಡೆ ಹಿಂದಕ್ಕೆ ಸರಿದಿರುವ ಬಗ್ಗೆ ದೃಢಪಡಿಸಿಲ್ಲ. ಆದರೆ, ಕೆಲ ಮಿಲಿಟರಿ ಬ್ಲಾಗ್‌ಗಳು ಅವುಗಳ ಮೇಲೆ ರಷ್ಯಾ ನಿಯಂತ್ರಣ ಕಳೆದುಕೊಂಡಿರುವುದನ್ನು ಒಪ್ಪಿಕೊಂಡಿವೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಪ್ರತಿದಾಳಿ ಪ್ರಾರಂಭವಾಗಿದೆ ಮತ್ತು ಉಕ್ರೇನ್ ಪಡೆ ನಷ್ಟ ಅನುಭವಿಸುತ್ತಿವೆ ಎಂದು ಪ್ರತಿಪಾದಿಸಿದ ಒಂದು ದಿನದ ನಂತರ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ‘ಪ್ರತಿದಾಳಿ ಮತ್ತು ರಕ್ಷಣಾತ್ಮಕ ಕ್ರಮ ನಡೆಯುತ್ತಿವೆ‌’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.