ADVERTISEMENT

ಕಾಳಿ ಮಾತೆಯ ಅವಹೇಳನ: ಕ್ಷಮೆ ಯಾಚಿಸಿದ ಉಕ್ರೇನ್‌ ಸಚಿವೆ

ಪಿಟಿಐ
Published 2 ಮೇ 2023, 13:28 IST
Last Updated 2 ಮೇ 2023, 13:28 IST
ಎಮಿನ್‌ ಡಿಝಾಪರೋವ
ಎಮಿನ್‌ ಡಿಝಾಪರೋವ   

ಲಂಡನ್‌: ಕಾಳಿ ಮಾತೆಯನ್ನು ‘ವಿಕೃತ ರೀತಿಯಲ್ಲಿ’ ಚಿತ್ರಿಸಿದ್ದಕ್ಕೆ ಉಕ್ರೇನ್‌ನ ವಿದೇಶಾಂಗ ಉಪ ಸಚಿವೆ ಎಮಿನ್‌ ಡಿಝಾಪರೋವ ಅವರು ಮಂಗಳವಾರ ಕ್ಷಮೆ ಯಾಚಿಸಿದ್ದಾರೆ.

‘ನಮ್ಮ ದೇಶದ ಜನರು ಭಾರತದ ಅನನ್ಯ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಉಭಯ ದೇಶಗಳ ನಡುವಿನ ಸಹಕಾರ ಇನ್ನಷ್ಟು ವೃದ್ಧಿಸಲಿದೆ’ ಎಂದು ಆವರು ಟ್ವೀಟ್‌ ಮಾಡಿದ್ದಾರೆ. ಉಕ್ರೇನ್‌ನ ರಕ್ಷಣಾ ಸಚಿವಾಲಯ ಕೂಡ ಈ ಕುರಿತು ಕ್ಷ‌ಮೆ ಕೋರಿದೆ.

ಸ್ಫೋಟಕದ ಹೊಗೆಯ ಸುರುಳಿ ನಡುವೆ ಕಾಳಿ ಮಾತೆ ಚಿತ್ರವನ್ನು ಚಿತ್ರಿಸಿ  ‘ವರ್ಕ್‌ ಆಫ್ ಆರ್ಟ್‌’ ಎಂಬ ಶೀರ್ಷಿಕೆಯೊಂದಿಗೆ ಉಕ್ರೇನ್‌ನ ರಕ್ಷಣಾ ಸಚಿವಾಲಯವು ಏಪ್ರಿಲ್‌ 30ರಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಳಿಕ ಟ್ವೀಟ್‌ ಅನ್ನು ಅಳಿಸಲಾಗಿತ್ತು.

ADVERTISEMENT

‘ಕಾಳಿ ದೇವಿಯ ವಿಕೃತ ಚಿತ್ರವನ್ನು ಟ್ವೀಟ್‌ ಮಾಡುವ ಮೂಲಕ ಉಕ್ರೇನ್‌, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್‌ ಗುಪ್ತಾ ಟ್ವೀಟ್‌ ಮಾಡಿದ್ದರು.

ಈ ಕುರಿತು ಹಲವರು ಟ್ವಿಟರ್‌ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಅವರ ಗಮನ ಸೆಳೆದಿದ್ದರು. ಎಮಿನ್‌ ಅವರು ಈಚೆಗೆ ಭಾರತಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.