ADVERTISEMENT

ರಷ್ಯಾದಲ್ಲಿ ಪ್ರತಿದಿನವೂ ಯುದ್ಧ ವಿರೋಧಿ ಪ್ರತಿಭಟನೆಗೆ ವಿಪಕ್ಷ ನಾಯಕ ನವಾಲ್ನಿ ಕರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2022, 10:16 IST
Last Updated 2 ಮಾರ್ಚ್ 2022, 10:16 IST
ಅಲೆಕ್ಸಿ ನವಾಲ್ನಿ
ಅಲೆಕ್ಸಿ ನವಾಲ್ನಿ    

ಮಾಸ್ಕೋ: ಉಕ್ರೇನ್‌ ಮೇಲಿನ ಆಕ್ರಮಣದ ವಿರುದ್ಧ ಜಗತ್ತಿನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕಾ, ಯೂರೋಪ್‌ ಸೇರಿದಂತೆ ವಿಶ್ವದ ಹತ್ತು ಹಲವು ದೇಶಗಳಲ್ಲಿ ಪುಟಿನ್‌ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ವ್ಲಾಡಿಮಿರ್‌ ಪುಟಿನ್‌ ಸರ್ಕಾರದ ವಿರುದ್ಧ ರಷ್ಯಾದಲ್ಲಿಯೂ ಟೀಕೆಗಳು ಕೇಳಿಬಂದಿವೆ. ವಿಪಕ್ಷ ನಾಯಕ, ಪುಟಿನ್‌ ಟೀಕಾಕಾರ ಅಲೆಕ್ಸಿ ನವಾಲ್ನಿ ಅವರು ರಷ್ಯಾದಾಂದ್ಯತ ಪ್ರತಿದಿನವೂ ‘ಯುದ್ಧ ವಿರೋಧಿ’ ಪ್ರತಿಭಟನೆಗಳನ್ನು ನಡೆಸಬೇಕೆಂದು ಕರೆ ನೀಡಿದ್ದಾರೆ.

ಈ ಕುರಿತು ನವಾಲ್ನಿ ಅವರ ವಕ್ತಾರ ಕಿರಾ ಯರ್ಮಿಶ್ ಬುಧವಾರ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪುಟಿನ್ ಅವರ ಕಟು ಟೀಕಾಕಾರ ಅಲೆಕ್ಸಿ ನವಾಲ್ನಿ ಅವರನ್ನು ರಷ್ಯಾ ಸರ್ಕಾರವು ‘ಭಯೋತ್ಪಾದಕರ ಪಟ್ಟಿ’ಗೆ ಸೇರ್ಪಡೆ ಮಾಡಿದೆ. ಸದ್ಯ ನವಾಲ್ನಿ ಅವರು ಜೈಲುವಾಸದಲ್ಲಿದ್ದಾರೆ.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಲೆಕ್ಸ್ ನವಾಲ್ನಿ ಅವರು ಪುಟಿನ್ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆ ಎಳೆದಿದ್ದರು.

ನಂತರ ನಡೆದ ಬೆಳವಣಿಗೆಗಳಲ್ಲಿ, ನವಾಲ್ನಿ ಅವರನ್ನು ವಿಷವಿಟ್ಟು ಕೊಲ್ಲಲು ಯತ್ನಿಸಲಾಗಿತ್ತು ಎಂಬ ಆರೋಪಗಳು ಕೇಳಿಬಂದವು. ಆದರೆ, ಪುಟಿನ್‌ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿತ್ತು.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ಮಕ್ಕಳು ಸೇರಿದಂತೆ ನಾಗರಿಕರ ಸಾವುಗಳು ಸಂಭವಿಸುತ್ತಿವೆ. ಲಕ್ಷಾಂತರ ಜನರು ಉಕ್ರೇನ್‌ನಿಂದ ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಇದು ಎರಡನೇ ಮಹಾಯುದ್ಧದ ಬಳಿಕ ಅತಿ ದೊಡ್ಡ ಮಾನವ ಬಿಕ್ಕಟ್ಟಾಗಿ ಪರಿಮಿಸಲಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಇದನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.