ADVERTISEMENT

ರಷ್ಯಾದ 71 ಡ್ರೋನ್ ಹೊಡೆದುರುಳಿಸಿದ್ದೇವೆ: ಉಕ್ರೇನ್

ಏಜೆನ್ಸೀಸ್
Published 22 ಸೆಪ್ಟೆಂಬರ್ 2024, 6:29 IST
Last Updated 22 ಸೆಪ್ಟೆಂಬರ್ 2024, 6:29 IST
<div class="paragraphs"><p>ರಷ್ಯಾ ನಡೆಸಿದ ದಾಳಿಯಿಂದಾಗಿ  ಉಕ್ರೇನ್‌ನ ಹಾರ್ಕಿವ್‌ ನಗರದಲ್ಲಿ ಕಟ್ಟಡ ಉರುಳಿರುವುದು. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.</p></div>

ರಷ್ಯಾ ನಡೆಸಿದ ದಾಳಿಯಿಂದಾಗಿ ಉಕ್ರೇನ್‌ನ ಹಾರ್ಕಿವ್‌ ನಗರದಲ್ಲಿ ಕಟ್ಟಡ ಉರುಳಿರುವುದು. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

   

ರಾಯಿಟರ್ಸ್ ಚಿತ್ರ

ಕೀವ್‌: ವಾಯು ದಾಳಿ ನಡೆಸುವುದಕ್ಕಾಗಿ ರಷ್ಯಾ ಸೇನೆ ಶನಿವಾರ ರಾತ್ರಿ ವೇಳೆ ಹಾರಿಸಿದ್ದ 80 ಡ್ರೋನ್‌ಗಳ ಪೈಕಿ 71ನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್‌ ವಾಯುಪಡೆ ಭಾನುವಾರ ತಿಳಿಸಿದೆ.

ADVERTISEMENT

ಟೆಲಿಗ್ರಾಂ ಮೂಲಕ ಮಾಹಿತಿ ನೀಡಿರುವ ವಾಯುಪಡೆ, ಆರು ಡ್ರೋನ್‌ಗಳು ಪ್ರತಿದಾಳಿ ಬಳಿಕ ನಾಪತ್ತೆಯಾಗಿವೆ ಎಂದಿದೆ.

ರಷ್ಯಾ ಆಕ್ರಮಿತ ಉಕ್ರೇನ್‌ ಪ್ರದೇಶಗಳಾದ ಲುಹಾನ್‌ಸ್ಕ್‌ ಪ್ರಾಂತ್ಯದಿಂದ ಕ್ಷಿಪಣಿಗಳನ್ನು ಉಡಾಯಿಸಲಾಗಿತ್ತು ಎಂದಿರುವ ವಾಯುಪಡೆ, ಅವು ಏನಾದವು ಎಂಬ ಮಾಹಿತಿಯನ್ನು ನೀಡಿಲ್ಲ.

ರಷ್ಯಾ–ಉಕ್ರೇನ್‌ ಸಮರ 2022ರ ಫೆಬ್ರುವರಿಯಿಂದಲೂ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.