ಕೀವ್: ತನ್ನ ಸೇನಾ ತುಕಡಿ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು (ಎನ್‌ಪಿಪಿ) ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಉಕ್ರೇನ್‌ನ ನ್ಯಾಷನಲ್ ಗಾರ್ಡ್ ಹೇಳಿದೆ.
'ಚೆರ್ನೋಬಿಲ್ ಎನ್‌ಪಿಪಿ ಸ್ಥಳದಲ್ಲಿನ ರಾಷ್ಟ್ರೀಯ ಕಾವಲುಗಾರರ ಪ್ರಮುಖ ಕಾರ್ಯವೆಂದರೆ ಅದರ ಪರಮಾಣು ಸೌಲಭ್ಯಗಳ ಭದ್ರತೆ ಮತ್ತು ರಕ್ಷಣೆ ಹಾಗೂ ಪರಮಾಣು ವಸ್ತುಗಳ ಭೌತಿಕ ರಕ್ಷಣೆಯನ್ನು ಖಾತ್ರಿಪಡಿಸುವುದಾಗಿದೆ' ಎಂದು ನ್ಯಾಷನಲ್ ಗಾರ್ಡ್ ಮಂಗಳವಾರ ಫೇಸ್‌ಬುಕ್‌ನಲ್ಲಿ ತಿಳಿಸಿದೆ.
ಸ್ಥಾವರದ ಸುರಕ್ಷತೆ ಮತ್ತು ಅದರ ಸಾರಿಗೆ ಮೂಲಸೌಕರ್ಯವನ್ನು ಉಕ್ರೇನ್‌ನ ಸಶಸ್ತ್ರ ಪಡೆಗಳು ಪರಿಶೀಲಿಸುತ್ತಿವೆ ಎಂದು ಅದು ಹೇಳಿದೆ.
ಫೆಬ್ರವರಿ 24 ರಿಂದ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ರಷ್ಯಾದ ಪಡೆಗಳು, ಮಾರ್ಚ್ 31 ರಂದು ಮಿಲಿಟರಿ ಕಾರ್ಯಾಚರಣೆಯನ್ನು ಹಿಂಪಡೆದಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೀವ್‌ನಿಂದ ಉತ್ತರಕ್ಕೆ 110 ಕಿಮೀ ದೂರದಲ್ಲಿ ಏ. 26, 1986ರಂದು ಮಾನವ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಚೆರ್ನೋಬಿಲ್ ದುರಂತ ಸಂಭವಿಸಿತ್ತು. ಸ್ಥಾವರದಲ್ಲಿ ಈಗಲೂ ಅಣುವಿಕಿರಣಗಳು ಸಕ್ರಿಯವಾಗಿವೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.