ADVERTISEMENT

ಅಮೆರಿಕದ ಒಪ್ಪಿಗೆಯಿಂದ ಜರ್ಮನಿ ನಿಲುವು ಬದಲು: ಝೆಲೆನ್‌ಸ್ಕಿ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:25 IST
Last Updated 22 ಅಕ್ಟೋಬರ್ 2024, 15:25 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ಕೀವ್‌: ಅಮೆರಿಕ ಚುನಾವಣೆ ಬಳಿಕ ಮಿತ್ರ ರಾಷ್ಟ್ರಗಳು ‘ನ್ಯಾಟೊ’ ಸೇರ್ಪಡೆ ವಿಚಾರವಾಗಿ ಸಕಾರಾತ್ಮಕ ನಿಲುವು ವ್ಯಕ್ತಪಡಿಸಲಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆಶಾಭಾವ ವ್ಯಕ್ತಪಡಿಸಿದರು.

‘ನ್ಯಾಟೊ (ನಾರ್ಥ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌) ಸೇರ್ಪಡೆ ಬಗ್ಗೆ ಅಮೆರಿಕ ಹಸಿರು ನಿಶಾನೆ ತೋರಿದೆ. ಆದರೆ, ಜರ್ಮನಿ ಸೇರಿದಂತೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಒಪ್ಪಿಗೆ ನೀಡುತ್ತಿಲ್ಲ. ಫ್ರಾನ್ಸ್‌, ಬ್ರಿಟನ್‌ ಮತ್ತು ಇಟಲಿ ಸಹ ಬೆಂಬಲ ವ್ಯಕ್ತಪಡಿಸುತ್ತಿವೆ. ಅಮೆರಿಕದ ಹಸಿರು ನಿಶಾನೆಯು ಜರ್ಮನಿಯ ನಿಲುವನ್ನು ಬದಲಾಯಿಸಲಿದೆ ಎಂದು ನಂಬಿದ್ದೇನೆ’ ಎಂದು ಹೇಳಿದರು. 

ಅಮೆರಿಕದ ಚುನಾವಣೋತ್ತರ ಬೆಳವಣಿಗೆ ಬಗ್ಗೆ ರಷ್ಯಾ ಸಹ ಎದುರು ನೋಡುತ್ತಿದೆ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.