ಕೀವ್: ಮೇ ತಿಂಗಳ ಆರಂಭದಿಂದ ಇಲ್ಲಿಯವರೆಗೆ 6,43,000 ಟನ್‌ನಷ್ಟು ಧಾನ್ಯ ರಫ್ತು ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವಿದೇಶಗಳಿಗೆ ಸುಮಾರು 18 ಲಕ್ಷ ಟನ್‌ನಷ್ಟು ಧಾನ್ಯ ರಫ್ತು ಮಾಡಲಾಗಿತ್ತು ಎಂದು ಉಕ್ರೇನ್ ಕೃಷಿ ಸಚಿವಾಲಯ ಗುರುವಾರ ತಿಳಿಸಿದೆ.
ರಷ್ಯಾ ಸೇನೆ ಫೆಬ್ರುವರಿ 24ರಂದು ಉಕ್ರೇನ್‌ನಲ್ಲಿ ಆಕ್ರಮಣ ಆರಂಭಿಸಿತ್ತು. ಇದರ ಪರಿಣಾಮವಾಗಿ, ಉಕ್ರೇನ್ ಧಾನ್ಯ ರಫ್ತಿನ ಪ್ರಮುಖ ಮಾರ್ಗವಾಗಿರುವ ಕಪ್ಪು ಸಮುದ್ರದಲ್ಲಿನ ಬಂದರುಗಳನ್ನು ನಿರ್ಬಂಧಿಸಲಾಗಿದೆ. ಇದು ರಫ್ತು ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ಸಚಿವಾಲಯ ಹೇಳಿದೆ.
ಮೇ ತಿಂಗಳಲ್ಲಿ ಸುಮಾರು 6.17 ಲಕ್ಷ ಟನ್ ಮೆಕ್ಕೆಜೋಳ, 16 ಸಾವಿರ ಟನ್ ಗೋದಿ ಹಾಗೂ 8 ಸಾವಿರ ಟನ್‌ನಷ್ಟು ಬಾರ್ಲಿಯನ್ನು ರಫ್ತು ಮಾಡಲಾಗಿದೆ ಎಂದೂ ಮಾಹಿತಿ ನೀಡಿದೆ. ಆದರೆ, ಧಾನ್ಯವನ್ನು ಹೇಗೆ ಸರಬರಾಜು ಮಾಡಲಾಯಿತು ಎಂದು ವಿವರಿಸಿಲ್ಲ.
ಮಾರ್ಚ್ ತಿಂಗಳಲ್ಲಿ ಸುಮಾರು3 ಲಕ್ಷ ಟನ್ ವರೆಗೆ ಹಾಗೂ ಏಪ್ರಿಲ್‌ನಲ್ಲಿ 10.9 ಲಕ್ಷ ಟನ್‌ಗಳಷ್ಟು ಧಾನ್ಯ ರಫ್ತು ಮಾಡಲಾಗಿದೆ ಎಂದು ಹಿರಿಯ ಕೃಷಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.