ADVERTISEMENT

ಯುರೋಪಿಯನ್ ಒಕ್ಕೂಟ – ಉಕ್ರೇನ್ ಭದ್ರತಾ ಒಪ್ಪಂದಕ್ಕೆ ಸಹಿ ಹಾಕುವೆ: ಝೆಲೆನ್‌ಸ್ಕಿ

ಏಜೆನ್ಸೀಸ್
Published 27 ಜೂನ್ 2024, 11:34 IST
Last Updated 27 ಜೂನ್ 2024, 11:34 IST
<div class="paragraphs"><p>ವೊಲೊಡಿಮಿರ್‌ ಝೆಲೆನ್‌ಸ್ಕಿ</p></div>

ವೊಲೊಡಿಮಿರ್‌ ಝೆಲೆನ್‌ಸ್ಕಿ

   

ಬ್ರಸೆಲ್ಸ್‌ (ಬೆಲ್ಜಿಯಂ): ಯುರೋಪಿಯನ್ ಒಕ್ಕೂಟದೊಂದಿಗೆ (ಇ.ಯು) ಭದ್ರತಾ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಉಕ್ರೇನ್‌ ಅನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಸದಸ್ಯತ್ವಕ್ಕೆ ಸಂಬಂಧಿಸಿದ ಔಪಚಾರಿಕ ಮಾತುಕತೆ ಆರಂಭಿಸಲಾಗುವುದು ಎಂದು ಇ.ಯು ಹೇಳಿದ ಕೆಲ ದಿನಗಳ ಬಳಿಕ ಝೆಲೆನ್‌ಸ್ಕಿ ಬ್ರಸೆಲ್ಸ್‌ಗೆ ಬಂದಿದ್ದಾರೆ. ರಷ್ಯಾ ಸೇನೆ ಉಕ್ರೇನ್‌ನಲ್ಲಿ ಸೇನಾ ಕಾರ್ಯಚಾರಣೆ ಆರಂಭಿಸಿರುವುದನ್ನು ವಿರೋಧಿಸುತ್ತಿರುವ ಹಲವು ರಾಷ್ಟ್ರಗಳ ನಾಯಕರನ್ನು ಝೆಲೆನ್‌ಸ್ಕಿ ಇಲ್ಲಿ ಭೇಟಿಯಾಗಲಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಇ.ಯು. ಹಾಗೂ ಅದರ ಸದಸ್ಯ ರಾಷ್ಟ್ರಗಳ ನಾಯಕರನ್ನು ಭೇಟಿಯಾಗಿ, ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಸಲಿದ್ದೇನೆ. ಈ ವೇಳೆ ಇ.ಯು. ಒಕ್ಕೂಟದೊಂದಿಗೆ ಒಂದು ಹಾಗೂ ಒಟ್ಟು ಮೂರು ಭದ್ರತಾ ಒಪ್ಪಂದಗಳಿಗೆ ಸಹಿ ಮಾಡಲಿದ್ದೇನೆ' ಎಂದು ತಿಳಿಸಿದ್ದಾರೆ.

ಇ.ಯು. ಒಕ್ಕೂಟದೊಂದಿಗಿನ ಒಪ್ಪಂದವು, ಉಕ್ರೇನ್‌ಗೆ ವ್ಯಾಪಕ ಬೆಂಬಲ ನೀಡುವ 27 ಸದಸ್ಯ ರಾಷ್ಟ್ರಗಳ ಬದ್ಧತೆಯನ್ನು ಮೊದಲ ಬಾರಿಗೆ ಪ್ರತಿಪಾದಿಸುತ್ತದೆ ಎಂದು ಹೇಳಿದ್ದಾರೆ.

ಈ ಒಪ್ಪಂದಗಳು ಯುರೋಪ್‌ ಖಂಡದಾದ್ಯಂತ ಶಾಂತಿ ಮತ್ತು ಸಮೃದ್ಧಿ ಮೂಡಿಸಲಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ, ಫ್ರಾನ್ಸ್‌, ಜರ್ಮನಿ, ಬ್ರಿಟನ್‌ ಮತ್ತು ಜಪಾನ್‌ ಸೇರಿದಂತೆ 17 ರಾಷ್ಟ್ರಗಳೊಂದಿಗೆ ಇದೇ ರೀತಿಯ ದ್ವಿಪಕ್ಷೀಯ ಭದ್ರತಾ ಒಪ್ಪಂದಗಳಿಗೆ ಉಕ್ರೇನ್‌ ಸಹಿ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.