ADVERTISEMENT

ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜರ್ಮನಿಗೆ: ಚಾನ್ಸಲರ್, ಅಧ್ಯಕ್ಷರೊಂದಿಗೆ ಮಾತುಕತೆ

ರಾಯಿಟರ್ಸ್
Published 10 ಅಕ್ಟೋಬರ್ 2024, 7:49 IST
Last Updated 10 ಅಕ್ಟೋಬರ್ 2024, 7:49 IST
<div class="paragraphs"><p>ವೊಲೊಡಿಮಿರ್‌ ಝೆಲೆನ್‌ಸ್ಕಿ</p></div>

ವೊಲೊಡಿಮಿರ್‌ ಝೆಲೆನ್‌ಸ್ಕಿ

   

ಬರ್ಲಿನ್‌: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಇಂದು (ಶುಕ್ರವಾರ) ಬರ್ಲಿನ್‌ಗೆ ಪ್ರಯಾಣ ಬೆಳೆಸಲಿದ್ದು, ಜರ್ಮನಿ ಚಾನ್ಸಲರ್ ಒಲಾಫ್ ಸ್ಕಾಲ್ಝ್ ಹಾಗೂ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಈ ಬಗ್ಗೆ ಎರಡು ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ADVERTISEMENT

'ಝೆಲೆನ್‌ಸ್ಕಿ ಅವರು ಶುಕ್ರವಾರ ಬರ್ಲಿನ್‌ಗೆ ಭೇಟಿ ನೀಡಲಿದ್ದಾರೆ. ಮೊದಲು ಸ್ಕಾಲ್ಝ್ ಅವರನ್ನು, ನಂತರ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರನ್ನು ಭೇಟಿಯಾಗಲಿದ್ದಾರೆ. ಇದು ಯೂರೋಪ್‌ ಪ್ರವಾಸದ ಭಾಗವಾಗಿದೆ' ಎಂದು ತಿಳಿಸಿದೆ.

ಝೆಲೆನ್‌ಸ್ಕಿ ಅವರು ಯೂರೋಪ್‌ನಲ್ಲಿ ತನ್ನ ಮಿತ್ರ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡುವ ಯೋಜನೆಯಲ್ಲಿದ್ದರು. ಆದರೆ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಭೇಟಿ ರದ್ದಾದ ಕಾರಣ, ಜರ್ಮನಿಯ ರಾಮ್‌ಸ್ಟೇಯ್ನ್‌ನಲ್ಲಿ ನಡೆಯಬೇಕಿದ್ದ ಸಮಾವೇಶ ಮುಂದೂಡಿಕೆಯಾಗಿದೆ. ಇದರಿಂದ ಝೆಲೆನ್‌ಸ್ಕಿ ಉದ್ದೇಶಕ್ಕೆ ಹಿನ್ನಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.