ADVERTISEMENT

20 ಲಕ್ಷ ದಾಟಿದ ಉಕ್ರೇನ್ ನಿರಾಶ್ರಿತರ ಸಂಖ್ಯೆ: ವಿಶ್ವಸಂಸ್ಥೆ

ಏಜೆನ್ಸೀಸ್
Published 9 ಮಾರ್ಚ್ 2022, 4:23 IST
Last Updated 9 ಮಾರ್ಚ್ 2022, 4:23 IST
ರಷ್ಯಾದ ಯುದ್ಧದಿಂದಾಗಿ ಇತರೆ ದೇಶಗಳಿಗೆ ವಲಸೆ ಹೋಗುತ್ತಿರುವ ಉಕ್ರೇನ್‌ ನಿರಾಶ್ರಿತರು. 
ರಷ್ಯಾದ ಯುದ್ಧದಿಂದಾಗಿ ಇತರೆ ದೇಶಗಳಿಗೆ ವಲಸೆ ಹೋಗುತ್ತಿರುವ ಉಕ್ರೇನ್‌ ನಿರಾಶ್ರಿತರು.    

ಕೀವ್(ಎಪಿ): ರಷ್ಯಾ ಸಾರಿದ ಯುದ್ಧದಿಂದ ಭಯಭೀತರಾಗಿರುವಉಕ್ರೇನ್‌ನ ಲಕ್ಷಾಂತರ ಮಂದಿ ನಿರಾಶ್ರಿತರು ಆಶ್ರಯ ಹರಸಿ ಇತರೆ ದೇಶಗಳಿಗೆ ಹೋಗುತ್ತಿದ್ದಾರೆ.

ಹೀಗೆಉಕ್ರೇನ್‌ನಿಂದ ಈವರೆಗೆ 20 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರು ಇತರೆ ದೇಶಗಳಿಗೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ 2ನೇ ಮಹಾಯುದ್ಧದ ಬಳಿಕ ಯುರೋಪ್ ರಾಷ್ಟ್ರಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಳವಾಗಿರುವುದು ಇದೇ ಮೊದಲು ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿದ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಫಿಲಿಪ್ಪೊ ಗ್ರಾಂಡಿ ಅವರು, "ಯುದ್ಧಪೀಡಿತ ಉಕ್ರೇನ್‌ನಿಂದ ಇತರೆ ದೇಶಗಳಿಗೆ ಆಶ್ರಯ ಬಯಸಿ ತೆರಳುತ್ತಿರುವ ನಿರಾಶ್ರಿತರ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಿದೆ. ಉಕ್ರೇನಿಗಳು ಬಯಸುವ ದೇಶಗಳಿಗೆ ತೆರಳಲು ಅವರಿಗೆ ಅವಕಾಶ ಕಲ್ಪಿಸಬೇಕು' ಎಂದು ತಿಳಿಸಿದ್ದಾರೆ.

ADVERTISEMENT

ಕೀವ್(ಎಪಿ, ‍ಪಿಟಿಐ): ರಷ್ಯಾ ಸಾರಿದ ಯುದ್ಧದಿಂದ ಭಯ ಭೀತರಾಗಿರುವಉಕ್ರೇನ್‌ನ ಲಕ್ಷಾಂತರ ಮಂದಿ ನಿರಾಶ್ರಿತರು ಆಶ್ರಯ ಅರಸಿ ಇತರೆ ದೇಶಗಳಿಗೆ ಹೋಗುತ್ತಿದ್ದಾರೆ. ಹೀಗೆಉಕ್ರೇನ್‌ನಿಂದ ಈವರೆಗೆ 20 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರು ಇತರೆ ದೇಶಗಳಿಗೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಅಲ್ಲದೆ 2ನೇ ಮಹಾಯುದ್ಧದ ಬಳಿಕ ಯುರೋಪ್ ರಾಷ್ಟ್ರಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಳವಾಗಿರುವುದು ಇದೇ ಮೊದಲು ಎಂದು ವಿಶ್ವಸಂಸ್ಥೆ ಆತಂಕ
ವ್ಯಕ್ತಪಡಿಸಿದೆ.

ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿದ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಫಿಲಿಪ್ಪೊ ಗ್ರಾಂಡಿ ಅವರು, ‘ಯುದ್ಧಪೀಡಿತ ಉಕ್ರೇನ್‌ನಿಂದ ಇತರೆ ದೇಶಗಳಿಗೆ ಆಶ್ರಯ ಬಯಸಿ ತೆರಳುತ್ತಿರುವ ನಿರಾಶ್ರಿತರ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಿದೆ. ಉಕ್ರೇನಿಗಳು ಬಯಸುವ ದೇಶಗಳಿಗೆ ತೆರಳಲು ಅವರಿಗೆ ಅವಕಾಶ ಕಲ್ಪಿಸಬೇಕು’ ಎಂದು ತಿಳಿಸಿದ್ದಾರೆ.

ಕಾರಿಡಾರ್‌ಗೆ ಒಪ್ಪಿಗೆ

ಪೂರ್ವ ಉಕ್ರೇನ್‌ನ ಸುಮಿ ನಗರದಲ್ಲಿ ನಾಗರಿಕರನ್ನು ಸ್ಥಳಾಂತರಿ ಸುವ ಸಲುವಾಗಿ ಉದ್ದೇಶಿಸಿರುವ ಸುರಕ್ಷಿತ ಮಾನವೀಯ ಕಾರಿಡಾರ್‌ಗಳಿಗೆ ಉಕ್ರೇನ್ ಮತ್ತು ರಷ್ಯಾದ ಅಧಿಕಾರಿಗಳು ಮಂಗಳವಾರ ಒಪ್ಪಿಗೆ ಸೂಚಿಸಿದ್ದಾರೆ.

ನಾಗರಿಕರನ್ನು ಸ್ಥಳಾಂತರಿಸಲು ಸ್ಥಳೀಯ ಕಾಲಮಾನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕದನ ವಿರಾಮಕ್ಕೆ ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ಉಕ್ರೇನ್‌ನ ಉಪ ಪ್ರಧಾನಿ ಐರಿನಾ ವೆರೆಶ್‌ಚುಕ್ ತಿಳಿಸಿದ್ದಾರೆ.

ಸುಮಿಯಿಂದ ಸ್ಥಳಾಂತರಿಸಲ್ಪಟ್ಟವರಲ್ಲಿ ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾಗರಿಕರು ಮತ್ತು ವಿದೇಶಿಯರ ಸುರಕ್ಷಿತ ಹಾದಿಗೆ ಅನುವು ಮಾಡಿಕೊಡುವ ಮಾನವೀಯ ಕಾರಿಡಾರ್‌ಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ರಷ್ಯಾ ಮತ್ತು ಉಕ್ರೇನ್ ವಿಶ್ವಸಂಸ್ಥೆಯಲ್ಲಿ ಪರಸ್ಪರ ದೂಷಿಸಿದ್ದವು. ಇದೇ ಸಂದರ್ಭದಲ್ಲಿ ಉಕ್ರೇನ್‌ನಲ್ಲಿರುವ ತನ್ನೆಲ್ಲ ನಾಗರಿಕರಿಗೆ ಅಡೆತಡೆಯಿಲ್ಲದ ಹಾದಿಯನ್ನು ಸುಗಮಗೊಳಿಸುವಂತೆ ಎರಡೂ ಕಡೆಯವರನ್ನು ಭಾರತವು ಒತ್ತಾಯಿಸಿತ್ತು.

‘ಆಹಾರ, ವಸತಿಯದ್ದೇ ಸಮಸ್ಯೆ’

ಎಲ್ವಿವ್ (ಎಪಿ): ಉಕ್ರೇನ್‌ನ ಇತರ ಭಾಗಗಳಿಂದ ಎಲ್ವಿವ್ ನಗರಕ್ಕೆ ವಲಸೆ ಬಂದಿರುವ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸುವುದು ಸಮಸ್ಯೆಯಾಗಿದೆ ಎಂದು ಎಲ್ವಿವ್ ಮೇಯರ್ ಆಂಡ್ರಿ ಸಡೋವಿ ಹೇಳಿದ್ದಾರೆ.

‘ನಮಗೀಗ ನಿಜಕ್ಕೂ ಬೆಂಬಲ ಬೇಕಿದೆ. ನಿರಾಶ್ರಿತರಿಗೆ ಕ್ರೀಡಾಂಗಣ, ಶಾಲೆಗಳು, ಆಸ್ಪತ್ರೆಗಳು ಮತ್ತು ಚರ್ಚ್‌ಗಳಲ್ಲಿ ವಸತಿ ಕಲ್ಪಿಸಲಾಗಿದೆ. ಈ ಹಿಂದೆ ಪ್ರವಾಸಿಗರ ಕಾರಣಕ್ಕಾಗಿ ಪ್ರಸಿದ್ಧಿಯಾಗಿದ್ದ ಎಲ್ವಿವ್ ನಗರದಲ್ಲೀಗ ಬರೀ ನಿರಾಶ್ರಿತರೇ ತುಂಬಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.