ಕೈರೊ: ಸುಡಾನ್ ಸೇನೆ ಹಾಗೂ ಅರೆಸೇನಾ ಗುಂಪಿನ ನಡುವೆ ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಆಂತರಿಕ ಯುದ್ಧದಲ್ಲಿ ಈವರೆಗೆ ಸುಮಾರು 9,000 ಮಂದಿ ಬಲಿಯಾಗಿದ್ದಾರೆ. ಇದು ಇತ್ತೀಚೆಗೆ ನಡೆದ ಅತ್ಯಂತ ದೊಡ್ಡ ದುರಂತ ಎಂದು ವಿಶ್ವಸಂಸ್ಥೆಯ ಮಾನವೀಯ ವಿಭಾಗ ಆತಂಕ ವ್ಯಕ್ತಪಡಿಸಿದೆ.
ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಈ ಘಟನೆಗಳಿಂದ ಎದುರಾಗಿರುವ ರಕ್ತಪಾತ ಮತ್ತು ಭಯೋತ್ಪಾದನೆಯಿಂದಾಗಿ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಜತೆಗೆ ಅತ್ಯಾಚಾರ ಮತ್ತು ದೈಹಿಕ ಹಿಂಸಾಚಾರದಂಥ ಘಟನೆಗಳು ಮುಂದುವರಿದಿವೆ ಎಂದು ವಿಶ್ವಸಂಸ್ಥೆಯ ಮಾನವೀಯ ವಿಭಾಗದ ಜನರಲ್ ಮಾರ್ಟಿನ್ ಗ್ರಿಫಿತ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್–ಫತಾಹ್ ಬುರ್ಹಾನ್ ಮತ್ತು ಪ್ಯಾರಾಮಿಲಿಟರಿಯ ಕಮಾಂಡರ್ ಜನರಲ್ ಮೊಹಮ್ಮದ್ ಹಮದಾನ್ ಡಗಾಲೊ ನಡುವಿನ ಬಿಕ್ಕಟ್ಟು ಆಂತರಿಕ ಯುದ್ಧಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.