ADVERTISEMENT

ಹವಾಮಾನದ ಬಗ್ಗೆ ಸರ್ಕಾರಗಳ ನಿಷ್ಕ್ರಿಯತೆ ಅಪಾಯಕಾರಿ: ವಿಶ್ವಸಂಸ್ಥೆ ಮುಖ್ಯಸ್ಥ

ಏಜೆನ್ಸೀಸ್
Published 14 ಜೂನ್ 2022, 12:31 IST
Last Updated 14 ಜೂನ್ 2022, 12:31 IST
ಆ್ಯಂಟೊನಿಯೊ ಗುಟೆರ್ರೆಸ್‌ 
ಆ್ಯಂಟೊನಿಯೊ ಗುಟೆರ್ರೆಸ್‌    

ಬರ್ಲಿನ್: ಹವಾಮಾನ ವೈಪರೀತ್ಯದ ನಿಯಂತ್ರಣಕ್ಕೆ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅಪಾಯಕಾರಿ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಆ್ಯಂಟೊನಿಯೊ ಗುಟೆರ್ರೆಸ್ ಎಚ್ಚರಿಕೆ ನೀಡಿದ್ದಾರೆ.

ಆಸ್ಟ್ರಿಯಾದಲ್ಲಿ ನಡೆಯುತ್ತಿರುವ ಹವಾಮಾನ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಜಾಗತಿಕ ಹಸಿರುಮನೆ ಅನಿಲವನ್ನು ಈ ದಶಕದಲ್ಲಿ ಶೇ 45ರಷ್ಟು ಇಳಿಸಬೇಕು. ಆದರೆ, ಅದು ಶೇ 14ರಷ್ಟು ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ’ ಎಂದರು. ನಾವು ಐತಿಹಾಸಿಕ ಮತ್ತು ಅಪಾಯಕಾರಿಯಾದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದೇವೆ. ಹವಾಮಾನ ಕ್ರಮಕ್ಕೆ ನಾಗರಿಕರು ಮತ್ತು ವಿಜ್ಞಾನ ಒತ್ತಾಯಿಸುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಭಾರಿ ಪರಿಣಾಮ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT