ADVERTISEMENT

ಮಾಧ್ಯಮಿಕ ಶಾಲೆಗಳಿಗೆ ಬಾಲಕಿಯರಿಗೆ ಪ್ರವೇಶ: ತಾಲಿಬಾನ್‌ನಿಂದ ಶೀಘ್ರ ಘೋಷಣೆ

ಯುನಿಸೆಫ್‌ ಹಿರಿಯ ಅಧಿಕಾರಿ ಒಮರ್ ಅಬ್ದಿ ಹೇಳಿಕೆ

ಏಜೆನ್ಸೀಸ್
Published 16 ಅಕ್ಟೋಬರ್ 2021, 5:45 IST
Last Updated 16 ಅಕ್ಟೋಬರ್ 2021, 5:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ‘ಅಫ್ಗಾನಿಸ್ತಾನದಲ್ಲಿ ಬಾಲಕಿಯರಿಗೆ ಮಾಧ್ಯಮಿಕ ಶಾಲೆಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಕುರಿತು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಾಲಿಬಾನ್‌ ತಿಳಿಸಿದೆ’ ಎಂದು ಯುನಿಸೆಫ್‌ನ ಉಪ ಕಾರ್ಯನಿರ್ವಾಹಕ ನಿರ್ದೇಶಕ ಒಮರ್ ಅಬ್ದಿ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ವಾರ ಅಫ್ಗನ್‌ ರಾಜಧಾನಿ ಕಾಬೂಲ್‌ಗೆ ಭೇಟಿ ನೀಡಿದ ವೇಳೆ ಈ ವಿಷಯ ಕುರಿತು ಚರ್ಚಿಸಲಾಯಿತು’ ಎಂದರು.

‘ಅಫ್ಗಾನಿಸ್ತಾನದ 34 ಪ್ರಾಂತ್ಯಗಳ ಪೈಕಿ ವಾಯವ್ಯ ಭಾಗದ ಬಾಲ್ಖ್, ಜವ್ಜಾನ್‌ ಮತ್ತು ಸಮಂಗನ್‌, ಈಶಾನ್ಯದಲ್ಲಿ ಕುಂಡುಜ್‌ ಮತ್ತು ನೈರುತ್ಯದಲ್ಲಿರುವ ಉರೋಜ್ಗನ್‌ ಪ್ರಾಂತ್ಯಗಳಲ್ಲಿ ಮಾಧ್ಯಮಿಕ ಶಾಲೆಗಳಿಗೆ ಬಾಲಕಿಯರು ಹೋಗಲು ಈಗಾಗಲೇ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಆರನೇ ತರಗತಿಯ ನಂತರ ಎಲ್ಲಾ ಬಾಲಕಿಯರು ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಅನುವು ಮಾಡಿಕೊಡುವ ಸಂಬಂಧ ನಿಯಮಗಳನ್ನು ರೂಪಿಸುತ್ತಿರುವುದಾಗಿ ತಾಲಿಬಾನ್ ಶಿಕ್ಷಣ ಸಚಿವರು ತಿಳಿಸಿದರು. ಈ ಕುರಿತು ಒಂದೆರಡು ತಿಂಗಳಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂಬುದಾಗಿ ಅವರು ಹೇಳಿದ್ದಾರೆ’ ಎಂದು ಒಮರ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.