ವಿಶ್ವಸಂಸ್ಥೆ: ದಕ್ಷಿಣ ಸುಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತದ ಶಾಂತಿಪಾಲಕರ ಕಾರ್ಯವನ್ನು ವಿಶ್ವಸಂಸ್ಥೆ ಪ್ರಶಂಸಿಸಿದೆ.
ವಿಶ್ವಸಂಸ್ಥೆಯ ದಕ್ಷಿಣ ಸುಡಾನ್ ಕಾರ್ಯಕ್ರಮದ (ಯುಎನ್‌ಎಂಐಎಸ್‌ಎಸ್) ಭಾಗವಾಗಿ ರಸ್ತೆ ನಿರ್ಮಾಣ ಮತ್ತು ಆಸ್ಪತ್ರೆಗಳಿಗೆ ಸೌರ ದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ಭಾರತೀಯ ಸೇನೆಯ ಎಂಜಿನಿಯರ್‌ಗಳು ಭಾಗಿಯಾಗಿದ್ದಾರೆ.
ಗಲಭೆಪೀಡಿತ ಸುಡಾನ್‌ನ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡಲು ಬಾಂಗ್ಲಾದೇಶ, ಚೀನಾ, ಥಾಯ್ಲೆಂಡ್ ಮತ್ತು ದಕ್ಷಿಣ ಕೊರಿಯಾದ ಶಾಂತಿಪಾಲಕರ ಜೊತೆ ಸೇರಿ ಭಾರತದ ಎಂಜಿನಿಯರ್‌ಗಳು 2,500 ಕಿ.ಮೀ. ರಸ್ತೆಗಳನ್ನು ದುರಸ್ತಿಗೊಳಿಸಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
‘ದಕ್ಷಿಣ ಸುಡಾನ್‌ನ ಜನರಿಗಾಗಿ ಸೇವೆ ಸಲ್ಲಿಸಲು ಎಂಜಿನಿಯರ್‌ಗಳನ್ನು ಕಳುಹಿಸಿರುವ ದೇಶಗಳಿಗೆ ಧನ್ಯವಾದಗಳು. ಅಲ್ಲಿನ ಜನರ ಜೀವನ ಮಟ್ಟ ಸುಧಾರಣೆಗಾಗಿ ಶಾಂತಿಪಾಲಕರು ವಹಿಸಿರುವ ಶ್ರಮ ಮಹತ್ವಪೂರ್ಣವಾದದ್ದು’ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅವರ ವಿಶೇಷ ಪ್ರತಿನಿಧಿ ಡೇವಿಡ್ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.