ವಿಶ್ವಸಂಸ್ಥೆ: ‘ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ನಡೆಸಿರುವ ಹೇಯ ದಾಳಿ’ಗಳನ್ನು ಖಂಡಿಸುವಂತೆ ಬ್ರೆಜಿಲ್ ಮಂಡಿಸಿದ್ದ ಗೊತ್ತುವಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು (ಯುಎನ್‌ಎಸ್‌ಪಿ) ಬುಧವಾರ ತಿರಸ್ಕರಿಸಿದೆ.
ಮಂಡಳಿಯ 15 ಸದಸ್ಯರಲ್ಲಿ 12 ಸದಸ್ಯರು ಗೊತ್ತುವಳಿ ಪರ ಮತ ಚಲಾಯಿಸಿದ್ದರು. ರಷ್ಯಾ ಮತ್ತು ಅಮೆರಿಕ ಮತ ಚಲಾಯಿಸುವುದರಿಂದ ದೂರ ಉಳಿದವು.
ಯುಎನ್‌ಎಸ್‌ಪಿಯ ಐದು ಶಾಶ್ವತ ಸದಸ್ಯ ದೇಶಗಳಲ್ಲಿ ಅಮೆರಿಕವು ಒಂದು. ಅಮೆರಿಕ ಮತ ನೀಡದ ಕಾರಣ ಗೊತ್ತುವಳಿ ತಿರಸ್ಕೃತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.